ಸಂತೋಷಕುಮಾರ ಎಸ್ ಕರಹರಿ ಅವರ ಪ್ರಥಮ ಕವನ ಸಂಕಲನ-ಒಲವಧಾರೆ.ಈ ಕವನ ಸಂಕಲನ ಪ್ರೀತಿ -ಪ್ರೇಮ -ವಿರಹದ ಪ್ರೇಮಲೋಕದಲಿ ತೇಲಿಸಿ ಪ್ರಗತಿಪರ ಆಶಯಗಳನ್ನು ಬುದ್ಧ-ಅಂಬೇಡ್ಕರ್-ಜಾತಿ ವ್ಯವಸ್ಥೆ ಜೊತೆಗೆ ದೇಸಿ ಆಟ,ಗೆಳೆತನ ಸಂಸಾರ,ದಾಂಪತ್ಯ-ಮಕ್ಕಳ ಚಿತ್ರಣ ಒಳಗೊಂಡಿರುವ ಕವನಗಳಿವೆ. ಡಾ, ಗವಿಸಿದ್ಧಪ್ಪ ಎಚ್ ಪಾಟೀಲರು ಮುನ್ನುಡಿ ಮತ್ತು ಜಯದೇವಿ ಗಾಯಕವಾಡ ಅವರು ಬೆನ್ನುಡಿ ಬರೆದಿರುತ್ತಾರೆ.
ಸಂತೋಷಕುಮಾರ ಎಸ್ ಕರಹರಿ ಅವರು ಆಳಂದ ತಾಲೂಕಿನ ಕರಹರಿ ಗ್ರಾಮದವರು ಆದರೆ ನೆಲೆಸಿದ್ದು ಕಲಬುರಗಿ. ಇವರು ಶಿವಶರಣಪಾ ಮತ್ತು ನಿಂಗಮ್ಮರ ಮಗನಾಗಿ 1982ರ ಜೂನ್ 1 ರಂದು ಜನಿಸಿದರು. ಬಿ. ಎ ಪದವೀಧರರು. ಒಲವಧಾರೆ (ಕವನ ಸಂಕಲನ) ಹಾಗೂ ಬುದ್ಧಲೋಕ (ಕವನ ಸಂಕಲನ) ಇವರ ಕೃತಿಗಳು. ...
READ MORE