‘ನೋವೂ ಒಂದು ಹೃದ್ಯ ಕಾವ್ಯ’ ಕವಿ ರಂಗಮ್ಮ ಹೊದೇಕಲ್ ಅವರ ಕವನ ಸಂಕಲನ. ಈ ಕೃತಿಗೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿ ಬರೆದು ‘ರಂಗಮ್ಮ ಹೊದೇಕಲ್ ಅವರು ತಮ್ಮ ರಚನೆಗಳಲ್ಲಿ ಸಿದ್ಧಮಾದರಿಗಳನ್ನು ಮೀರಿದ ಹನಿಗವನ ಅಥವಾ ಮಿನಿ ಗವನಗಳ ರಚನೆಯ ಮೂಲಕ ಗಂಭೀರವಾಗಿ ಪರಿಗಣಿಸಬೇಕಾದ ಕವಿಯಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಈ ಮಾದರಿಯ ಕವನಗಳು ಲಘುತ್ವಕ್ಕೆ, ಪ್ರಾಸಕ್ಕೆ, ಸಂದೇಶಕ್ಕೆ ಮಾತ್ರ ಇಲ್ಲ ಎಂದು ಭಾವಿಸಿದ್ದಾರೆ. ಮತ್ತು ತಮ್ಮ ಭಾವನೆಗಳಿಗನುಗುಣವಾಗಿ ಅಭಿವ್ಯಕ್ತಿಸಿದ್ದಾರೆ. ಸಂಕಲನದ ಶೀರ್ಷಿಕೆಯೇ ಕವಿಯ ಜೀವನ ದೃಷ್ಟಿದರ್ಶನವನ್ನು ಅಭಿವ್ಯಕ್ತಿಸುತ್ತದೆ. ನೋವೂ ಕೂಡಾ ಒಂದು ಹೃದ್ಯ ಕಾವ್ಯವೆಂಬ ಪರಿಕಲ್ಪನೆಯು ಬದುಕನ್ನು ಕಾವ್ಯವೆಂಬಂತೆ ಸ್ವೀಕರಿಸುವ ನೋವನ್ನೂ ಹೃದಯಸ್ಥ ಮಾಡಿಕೊಳ್ಳುವ ವಿಶಿಷ್ಠ ನೆಲೆ ಮತ್ತು ನಿಲುವಿನಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ರಂಗಮ್ಮ ಹೊದೇಕಲ್ ಅವರು ಅಪ್ಪಟ ಗ್ರಾಮೀಣ ಪ್ರತಿಭೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ತಮ್ಮ ಅಂದವಾದ ಕೈ ಬರಹದಿಂದ ಕಳೆದ 15 ವರ್ಷಗಳಿಂದ ಶೈನಾ ಮಾಸಪತ್ರಿಕೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಸ್ಥಳೀಯ ಪತ್ರಿಕೆಯ ಅಂಕಣಕಾರರಾಗಿದ್ದಾರೆ. ನಾಡಿನ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಮುಂಬಯಿ ಕನ್ನಡ ಸಂಘ, ಮೈಸೂರಿನ ಕನ್ನಡ ಕಾವಲು ಸಮಿತಿ, ತುಮಕೂರಿನ ಭೂಮಿ ಬಳಗ, ರೋಟರಿ ಸಂಸ್ಥೆ, ಜಿಲ್ಲಾ ಲೇಖಕಿಯರ ಸಂಘ, ಮಹಿಳಾ ಸಂಘಟೆಯ ಸನ್ಮಾನ ಗೌರವಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ವಿಶಿಷ್ಟ ಲೇಖಕಿ ಪ್ರಶಸ್ತಿ ಪುರಸ್ಕೃತರು. ...
READ MORE‘ನೋವೂ ಒಂದು ಹೃದ್ಯ ಕಾವ್ಯ’ ಕೃತಿಯ ವಿಮರ್ಶೆ
ಪುಸ್ತಕ ಅವಲೋಕನದ ಪ್ರಥಮ ವಾರ್ಷಿಕೋತ್ಸವ ದಿನಾಚರಣೆಯ ಸಂಭ್ರಮದ ಅಭಿಯಾನದಲ್ಲಿ, ನಾನು, ನನ್ನಿಷ್ಟದ ಕೃತಿ ಶೀರ್ಷಿಕೆಯಲ್ಲಿ ಮಾನ್ಯ ಡಿವಿಜಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮ ಯೋಗ ಎಂಬ ಕೃತಿಯನ್ನು ಪರಿಚಯಿಸಿದ್ದೆ. ಈ ಲೇಖನವನ್ನು ಮೆಚ್ಚಿ ಕನ್ನಡ ಕಥಾಗುಚ್ಛ ಹಾಗೂ ಪುಸ್ತಕ ಅವಲೋಕನದ ಸಕ್ರಿಯ ಸದಸ್ಯರೂ, ಶಿಕ್ಷಕಿಯರೂ ಆದ ಶ್ರೀಮತಿ ನಂದಿನಿ ಮೇಡಂ ನವರು, ಈ ಕೃತಿಯನ್ನು ನನಗೆ ಬಹುಮಾನವಾಗಿ 3 ದಿನಗಳ ಹಿಂದೆ ಅಂಚೆ ಮೂಲಕ ಅಭಿಮಾನಪೂರ್ವಕವಾಗಿ ಕಳುಹಿಸಿದ್ದರು. ಮೇಡಂ ಅವರಿಗೆ ನನ್ನ ಧನ್ಯವಾದಗಳು. ಶ್ರೀಮತಿ ನಂದಿನಿ ಮೇಡಂ ಅವರ ಸ್ನೇಹಿತರಾದ ಲೇಖಕಿ ರಂಗಮ್ಮ ಹೊದೇ ಕಲ್... ಇವರ ಈ ಕೃತಿ ಒಂದು ವಿಶಿಷ್ಟವಾದದ್ದು ಹಾಗೂ ವಿಶೇಷವಾದದ್ದು.
ವಿಶೇಷವಾದದ್ದು ಎನ್ನಲು ಕಾರಣವೇನೆಂದರೆ, ಈ ಕೃತಿಯಲ್ಲಿರುವ ಎಲ್ಲ ಕವಿತೆಗಳನ್ನು ತಮ್ಮ ಸುಂದರ "ಕೈಬರಹ"ದಲ್ಲಿ ಬರೆದು, ಅದನ್ನೇ ಯಥಾವತ್ ಅಚ್ಚು ಹಾಕಿಸಲಾಗಿದೆ. ಹೀಗೆ ಕೈಬರಹದ ಕೃತಿಯನ್ನು ನಾನು ಮೊಟ್ಟಮೊದಲಿಗೆ ಕಂಡು ಆಶ್ಚರ್ಯಪಟ್ಟೆ, ಅಂದವಾದ ಬರಹ ಕಂಡು ಸಂತೋಷಪಟ್ಟೆ. ಅಷ್ಟೇ ಅಲ್ಲದೆ ಇಲ್ಲಿರುವ ಕವಿತೆಗಳು ಸಹ ವಿಶೇಷ ಎನ್ನಿಸುವಂತೆ ಇವೆ.ಅವರ ಕೈಬರಹವನ್ನು ಇಲ್ಲಿರುವ ಫೋಟೋಗಳಲ್ಲಿ ಕಾಣಬಹುದು.
( ಬರಹ : ರಂಗಮ್ಮ ಹೊದೇಕಲ್)