ಕಳೆದ ಎರಡುವರೆ ದಶಕಗಳಲ್ಲಿ ಕವಿ ಮನು ಪರಿಶೀಲಿಸಿದ ಸಾಹಿತ್ಯ ಕೃತಿಗಳಲ್ಲಿ ಬಯಕೆ (ಡಿಸೈರ್) , ನ್ಯಾಯ (ಜಸ್ಟಿಸ್) ಮತ್ತು ಸ್ವಾತಂತ್ರ್ಯ (ಫ್ರೀಡಂ), ಇವುಗಳ ನಡುವೆ ಒಂದು ಗುಣಾತ್ಮಕ ಸಂಬಂಧವಿದ್ದು, ಈ ಶೋಧಕ್ಕೆ ನಿರ್ದಿಷ್ಟವಾದ ನೆಲೆಯೊಂದನ್ನು ಇಲ್ಲಿಯ ಕವಿತೆಗಳ ಮೂಲಕ ನೀಡಿದ್ದಾರೆ ಮನು ವಿ. ದೇವದೇವನ್. ವಿಲಿಯಂ ಬ್ಲೇಕ್ ನ ಎಂಟು ಜನಪ್ರಿಯ ಕವಿತೆಗಳನ್ನೂ ಕನ್ನಡೀಕರಿಸಿ ಇಲ್ಲಿ ಸೇರಿಸಿದ್ದಾರೆ.ಕನ್ನಡ ಸಾರಸ್ವತ ಲೋಕದ ವ್ಯಕ್ತಿತ್ವಗಳು ಕವಿಯನ್ನು ಪ್ರಭಾವಿಸಿದ ಬಗೆಯೂ ಕವಿತೆಗಳ ಸಾಲು, ಪದಗಳ ಮೂಲಕ ಗುರುತಿಗೆ ಸಿಗುವಷ್ಟು ಪರಿಚಿತವಾಗಿ ದಾಖಲಾಗಿರುವುದನ್ನು ಗಮನಿಸಬಹುದು.
ಮನು ದೇವದೇವನ್ ಅವರು ಮಂಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಮನು ದೇವದೇವನ್ ಅವರು ದಕ್ಷಿಣ ಭಾರತದ ಆಧುನಿಕ ಪೂರ್ವ ಇತಿಹಾಸಕ್ಕೆ ಸಂಬಂಧಿಸಿದಂತೆ ಅನನ್ಯ ಹಾಗೂ ವ್ಯಾಪಕ ಕೊಡುಗೆ ನೀಡಿದ್ದಾರೆ. ಅವರ ’A Pre-History of Hinduism’ ಕೃತಿಯು ಭಾರತದ ಸಾಂಸ್ಕೃತಿಕ ಇತಿಹಾಸ ಅಧ್ಯಯನ ಕ್ಷೇತದಲ್ಲಿ ವಿಭಿನ್ನ ನೋಟ ಹಾಗೂ ಆಲೋಚನಾ ಕ್ರಮದಿಂದ ವಿಶಿಷ್ಟ ಸ್ಥಾನ ಪಡೆದಿದೆ. ಹಲವು ಭಾಷೆಗಳ ಆಕರಗಳನ್ನು ಬಳಸಿ ತಮ್ಮ ಅಪೂರ್ವ ಒಳನೋಟವನ್ನು ಕಟ್ಟಿಕೊಡುವ ಕಾರಣಕ್ಕಾಗಿ ಅವರು ಪರಿಚಿತರಾಗಿದ್ದಾರೆ. ಪೃಥ್ವಿಯಲ್ಲೊದಗಿದ ಘಟವು…ಅವರ ...
READ MORE