‘ನೆನೆದದ್ದು ಹೆಚ್ಚಾಗಿ’ ಹಿರಿಯ ಲೇಖಕ ಹರಿಯಪ್ಪ ಪೇಜಾವರ ಅವರ ಕವಿತಾ ಸಂಕಲನ. ಈ ಕೃತಿಗೆ ಜಯಂತ ಕಾಯ್ಕಿಣಿ ಹಾಗೂ ಬಿ. ಜನಾರ್ದನ ಭಟ್ ಬೆನ್ನುಡಿ ಬರೆದಿದ್ದಾರೆ. ‘ದಾಹ, ಮೋಹ ಎರಡೂ ಇಲ್ಲದೆ ಸೊರಗಿ ನಿಸ್ತೇಜಗೊಂಡಿರುವ ಈಗಿನ ಕನ್ನಡ ಕಾವ್ಯಕ್ಕೆ ಬೇಕಾಗಿರೋದು-ಹೊಸ ಮನಸ್ಸು, ಹೊರತು ಹೊಸ ಕಾರಕೂನಿಕೆಯಲ್ಲ. ಅಂಥಾ ತಾಜಾ ಮನಸ್ಸು ಮತ್ತು ಕಾವ್ಯ ಧೈರ್ಯ ಹೊಂದಿರುವ ಹರಿಯಪ್ಪ ಪೇಜಾವರರ ಕವಿತೆಗಳು ತಮ್ಮ ಶಬ್ದ ಭಾರ ಇಳಿಸಿಕೊಳ್ಳುತ್ತ, ಬಹುಕಾಲ ಈಸಲಿ ಎಂದು ಜಯಂತ ಕಾಯ್ಕಿಣಿ ಹಾರೈಸಿದ್ದಾರೆ.
ಅಲ್ಲದೇ , ಹಳ ಹಳಿಕೆಯಿಲ್ಲದ ಬದುಕನ್ನು ಆವಾಹಿಸಿಕೊಳ್ಳುವ ಪ್ರಯತ್ನದಲ್ಲಿ ಹರಿಯಪ್ಪರ ಕವನಗಳ ನಾಯಕ ಬದುಕು ಕಟ್ಟುವ ಕಾಯಕದಲ್ಲಿ ತೊಡಗಿದ್ದಾನೆ. ಹಾಗಾಗಿ, ಹರಿಯಪ್ಪ ಪೇಜಾವರರು ನವ್ಯದಲಿತ ಬಂಡಾಯಗಳ ಇಳಿಗಾಲದಲ್ಲಿ ಹೊಳೆಯುವ ಕವಿಯಾಗಿದ್ದಾರೆ ಎಂದು ಬಿ. ಜನಾರ್ದನ ಭಟ್ ಅವರ ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಹರಿಯಪ್ಪ ಪೇಜಾವರ ಮೂಲತಃ ಮಂಗಳೂರಿನ ಬಜ್ಪೆ ಸಮೀಪದ ಪೇಜಾವರದವರು. ಪೇಜಾವರ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ, ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಬಿ.ಕಾಂ. ಪದವಿ, ಮಂಗಳಗಂಗೋತ್ರಿಯಲ್ಲಿ ಎಂ.ಎ ಹಾಗೂ 1989ರಿಂದ ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದಾರೆ. ಕೃತಿಗಳು: ಕವನಸಂಕಲನಗಳು- ವ್ಯಕ್ತಿ ಮತ್ತು ವ್ಯಕ್ತ(1986), ನೆನದದ್ದು ಹೆಚ್ಚಾಗಿ(2001), ಕಲಾವಿದನ ಕೊಲೆ(2012) , ಕಥಾಸಂಕಲನ: ಮಾನ ಮತ್ತು ಇತರ ಕಥೆಗಳು(1996), ಇನ್ನೊಂದು ಗ್ರಹ (2015) ಹಾಗೂ ಲೇಖನ ಸಂಗ್ರಹ- ಯಾರ ಮುಲಾಜೂ ಇಲ್ಲದೆ(2016). ಪ್ರಶಸ್ತಿ ಗೌರವ: ಇವರ ವ್ಯಕ್ತಿ ಮತ್ತು ವ್ಯಕ್ತ ಸಂಕಲನಕ್ಕಾಗಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮಾನ ಮತ್ತು ಇತರ ಕಥೆಗಳಿಗೆ ವರ್ಧಮಾನ ...
READ MORE