ನೆಲದ ಮರೆಯ ನಿಧಾನ

Author : ಸಿದ್ದು ಯಾಪಲಪರವಿ

Pages 80

₹ 50.00




Year of Publication: 2007
Published by: ದೃಷ್ಟಿ ಪ್ರಕಾಶನ
Address: ಕೆ.ಸಿ ರಾಣಿ ರಸ್ತೆ, ಮೋಡ್‌ ಹೈ ಸ್ಕೂಲ್ ಎದುರು, ಗದಗ-582101
Phone: 9448746628

Synopsys

’ನೆಲದ ಮರೆಯ ನಿಧಾನ’ ಶುದ್ಧ ದೇಸಿ ಕವಿತೆಗಳು. ಈ ಕವಿತೆಗಳಿಗೆ ನಾದವೂ ಉಂಟು, ಲಯದ ಬಳುಕುಗಳೂ ಉಂಟು. ಈ ಸಂಕಲನದ 'ಆರ್ತನಾದ' ಎಂಬ ಕವಿತೆ ಯಾಪಲಪರವಿಯವರ ಸಂಕಟಕ್ಕೆ ಹಿಡಿದ ಕನ್ನಡಿಯಾಗಿದೆ. ಇವು ವ್ಯಕ್ತಿಯ ಸಂಕಟ, ಆತಂಕದ ರೂಪಗಳಾಗಿವೆ. ಕವಿತೆ ಆರಂಭವಾಗುವುದು 'ಮನದ ಬಾಗಿಲು'ಗಳ ರೂಪಕದಿಂದ. ಈ ಸಂಕಲನವು ಮುಖ್ಯವಾಗಿ ವ್ಯಕ್ತಿನೆಲೆಯ ಪ್ರೀತಿ ಮುಖಗಳನ್ನು ಹುಡುಕುತ್ತದೆ. ಕವಿತೆಯ ಲೋಕದಿಂದ ಪ್ರತ್ಯಕ್ಷ ಸಾಕ್ಷ್ಯವನ್ನು ಒದಗಿಸಲು ಯತ್ನಿಸುತ್ತದೆ. ’ನೆಲದ ಮರೆಯ ನಿಧಾನ’ ಸಿದ್ದು ಯಾಪಲಪರವಿ ಅವರ ಮೊದಲ ಪ್ರಕಟಿತ ಕೃತಿ.

About the Author

ಸಿದ್ದು ಯಾಪಲಪರವಿ
(12 April 1965)

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ  ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ.  1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ...

READ MORE

Related Books