ಆಧುನಿಕೋತ್ತರ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬೆಳೆದು ಬಂದ ಸಿ.ಎಸ್.ಭೀಮರಾಯರ ಬರಹಕ್ಕೆ ಅನೇಕ ಆಯಾಮಗಳಿವೆ. ಅವು ಮೂಲತಃ ಆಕ್ರೋಶ, ವ್ಯಂಗ್ಯದ ಒಡಲಲ್ಲಿ ಹುಟ್ಟಿದರೂ ಆಳದಲ್ಲಿ ತಣ್ಣನೆಯ ಧ್ಯಾನವನ್ನು, ಭವಿಷ್ಯದ ಕುರಿತು ಪ್ರಗತಿಪರ ಚಿಂತನೆಯನ್ನು ಹೊಂದಿವೆ. ಭಾಷೆ ಬಂಡಾಯದಂತಹ ಚಳವಳಿಯ ಶಕ್ತಿ ಹೊಂದಿಯೂ ಅವರ ಕಾವ್ಯ ಶ್ರಮಿಕ ಶೋಷಿತರ ಪರವಾಗಿ ಹಂಬಲಿಸುತ್ತದೆ; ಅದನ್ನು ಕಣ್ಣರೆಪ್ಪೆಯಲ್ಲಿಟ್ಟು ಜೋಪಾನವಾಗಿ ಕಾಪಾಡಿದೆ.
ಜನರು ಗುಳೆ ಹೊರಟಾಗ, ನೆರೆಯಲ್ಲಿ ಮುಳುಗಿದಾಗ, ಬಡತನದ ಬೇಗೆಯಲ್ಲಿ ಉರಿದಾಗ, ಪಾಳೆಗಾರಿಕೆಯಲ್ಲಿ ನರಳಿದಾಗ, ಜಾತೀಯತೆಯಲ್ಲಿ ನೊಂದಾಗ, ದಬ್ಬಾಳಿಕೆಗೆ ಒಳಗಾದಾಗ, ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ನಲುಗಿದಾಗ ಎದ್ದ ಕೂಗೇ ‘ ನೆಲದ ಮಗನ ಹಾಡು’.
ಲೇಖಕ ಸಿ.ಎಸ್.ಭೀಮರಾಯ ಅವರು ಹೊಸ ತಲೆಮಾರಿನ ಕವಿ ಮತ್ತು ವಿಮರ್ಶಕ. 1981ರಲ್ಲಿ ಜನನ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಭಾಷೆ ಉಪನ್ಯಾಸಕರು. ಈವರೆಗೆ ಕನ್ನಡದಲ್ಲಿ ಐದು ಮತ್ತು ಆಂಗ್ಲ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾವ್ಯ, ಪ್ರಬಂಧ ಮತ್ತು ವಿಮರ್ಶೆಗಳಲ್ಲಿನ ಸಂವೇದನೆಗಳು, ಧ್ಯೇಯ-ಧೋರಣೆಗಳು ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳ ಬಗೆಗಿನ ತೀವ್ರ ಕಾಳಜಿ, ಅನ್ಯಾಯದ ವಿರುದ್ಧ ಸಿಡಿದೇಳುವ ಆಕ್ರೋಶ, ಸಿಟ್ಟು, ವ್ಯಂಗ್ಯ, ಬಂಡಾಯ-ಅವರ ಬರವಣಿಗೆಯಲ್ಲಿ ಗಮನ ಸೆಳೆಯುತ್ತವೆ. ಕೃತಿಗಳು: ...
READ MORE