ʼನೆಲದ ಚಿಗುರುʼ ಕವನಸಂಕಲನ ಕವಿ ಗೌಡಗೆರೆ ಮಾಯುಶ್ರೀ ಅವರ ಚೊಚ್ಚಲ ಕವನಸಂಕಲನ. ಕನ್ನಡ ಭಾಷೆ, ಪ್ರೀತಿ -ಪ್ರೇಮ ಕುರಿತ ಕವಿತೆಗಳಿದ್ದು, ಹೆಚ್ಚಿನ ಕವಿತೆಗಳು ಸಾಮಾಜಿಕ ನ್ಯಾಯ, ರೈತಪರ ಕಾಳಜಿ, ಜಾತಿ-ಮತ, ಹಸಿವು-ಬಡತನ, ಮೂಢನಂಬಿಕೆ ಇತ್ಯಾದಿ ವಸ್ತುವನ್ನೊಳಗೊಂಡ ಜಾಗೃತ ದಲಿತ ಪ್ರಜ್ಞೆಯ ಪ್ರತೀಕವಾಗಿ ಮೂಡಿಬಂದಿದೆ. ಕವಿಯ ಮನ ಮಥನದ ಮೂಲ ಸೆಲೆಯೇ ಕಾವ್ಯದಲ್ಲಿ ಜೀವರಸವಾಗಿ ಹರಿದಾಡುವುದರಿಂದ ಆತನ ಚಿಂತನಾ ವಿಧಾನವೇ ಕವನವಾಗಿ ಅರಳುತ್ತದೆ. ಜೊತೆಗೆ, ಕವಿಯ ಪ್ರತಿಭೆ, ಬದ್ದತೆ, ಕಲಾತ್ಮಕತೆ, ಮಾನವೀಯತೆಯಂತಹ ಅಂಶಗಳೂ ಸೇರಿ ಓದುಗನನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತವೆ.
ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಗೌಡಗೆರೆ ಮಾಯುಶ್ರೀ, ನಂತರ ಕನ್ನಡಕಟ್ಟಾಳು ವೈಶ್ರೀನಿವಾಸರ ನೇತೃತ್ವದ ವೀರಸೇನಾನಿ ಮ॥ ರಾಮಮೂರ್ತಿ ಕನ್ನಡ ಬಳಗದ ಗೌರವ ಕಾರ್ಯದರ್ಶಿಯಾಗಿ ಅನೇಕ ಕನ್ನಡ ಪರ ಹೋರಾಟ ಮತ್ತು ನಾಡು ನುಡಿ ನೆಲ ಜಲ ಪರವಾದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯನಾಗಿ, ಗಾಂಧಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಮೂರು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.. ಇವರು ಬರೆದ ಬಿಡಿ ಬಿಡಿ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಕರ್ಮವೀರ, ರಾಗಸಂಗಮ ಪ್ರಿಯಾಂಕ, ಮಾರ್ದನಿ, ಚಾಣಗೆರೆ ಪತ್ರಿಕೆ, ಬಹುಜನ ಕನ್ನಡಿಗರು, ಈ ಭಾನುವಾರ, ...
READ MORE