‘ನೇಗಿಲ ಗೆರೆ’ ಹಂದಲಗೆರೆ ಗಿರೀಶ್ ಅವರ ಕವನ ಸಂಕಲನ. ರೈತ ಸಮುದಾಯದಿಂದ ಬಂದ ಕವಿ ತಮ್ಮ ಕವಿತೆಗಳ ಮೂಲಕ ರೈತ ಸಮುದಾಯದ ಕಷ್ಟ ಸುಖಕ್ಕೆ ಸ್ಪಂದಿಸುತ್ತಾರೆ.
ಸಂಕಲನದ ಅನೇಕ ಕವಿತೆಗಳಲ್ಲಿ ರೈತರ ಸ್ಥಿತಿಗತಿಗಳ ಸಂಕೇತ, ರೂಪಕ, ಧ್ವನಿ, ವಾಚ್ಯ ಹೀಗೆ ವಿವಿಧ ಅಭಿವ್ಯಕ್ತಿ ವಿಧಾನಗಳಲ್ಲಿ ಕಟ್ಟಿಕೊಡಲಾಗಿದೆ. ಕೆಲವು ಕವಿತೆಗಳು ಒಟ್ಟು ಸಾಮಾಜಿಕ ಆರ್ಥಿಕ ಸನ್ನಿವೇಶಕ್ಕೆ ರೂಪಕವಾಗುವ ಮೂಲಕ ರೈತರಾಚೆಗೂ ಇರುವ ಸಂಕೇತಗಳನ್ನು ಶೋಧಿಸುವುದು ಒಂದು ವಿಶೇಷವಾಗಿದೆ. ಜಾತಿ-ಧರ್ಮಗಳ ಹೆಸರಿನಲ್ಲಿ ಮಾನವೀಯ ಮೌಲ್ಯಗಳನ್ನು ನುಂಗಿ ನೊಣೆಯುತ್ತಿರುವ ಕ್ರೌರ್ಯಕ್ಕೆ ಎದುರಾಗಿ ಕರುಳ ದನಿಯಾಗಿರುವ ತುಡಿತವು ಕೆಲವು ಕವನಗಳಲ್ಲಿದೆ.
ಕವಿ, ಸಾಹಿತಿ, ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು. ತಂದೆ ಚಿಕ್ಕತಿಮ್ಮಯ್ಯ, ತಾಯಿ ಶಾಂತಮ್ಮ. ಸಾಮಾನ್ಯ ರೈತಕುಟುಂಬದಲ್ಲಿ ಹುಟ್ಟಿದ ಗಿರೀಶ್ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ರಂಗಭೂಮಿ, ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ವಿಚಾರಗಳು. ಸಧ್ಯ ಕೃಷಿಯಲ್ಲೂ ತೊಡಗಿರುವುದರಿಂದ ಬಿಡುವಿನ ಸಮಯವೆಲ್ಲಾ ಕೃಷಿಗೆ ಮೀಸಲಿಟ್ಟಿದ್ದಾರೆ. ' ನೇಗಿಲ ಗೆರೆ ' 'ನೀರಮೇಗಲ ಸಹಿ' ಎಂಬ ಎರಡು ಕವನ ಸಂಕಲನಗಳು ಮತ್ತು 'ಅರಿವೇ ಅಂಬೇಡ್ಕರ್ 'ಕೃತಿ ಸಂಪಾದನೆ ಮಾಡಿದ್ದಾರೆ. ಅವರ ಕವಿತೆ ...
READ MORE