’ನೆಗೆವ ಪಾದದ ಜಿಗಿತ’ ಡಾ. ಎಚ್.ಎಸ್. ಅನುಪಮಾ ಅವರ ಕವಿತೆಗಳ ಸಂಕಲನ. ವೃತ್ತಿಯಿಂದ ವೈದ್ಯರಾಗಿರುವ ಅನುಪಮಾ ಅವರು ಪ್ರವೃತ್ತಿಯಿಂದ ಕವಿ-ಲೇಖಕಿ. ಜೀವಪರ ನಿಲುವು-ಜನಪರ ನೋಟ ಅವರ ಬರವಣಿಗೆಯ ವಿಶೇಷ. ಅವರ ಬಹುತೇಕ ಕವಿತೆಗಳು ಕೂಡ ಇದೇ ಧಾಟಿಯಲ್ಲಿವೆ. ಕವಿತೆಗಳಿಗಾಗಿ ಕವಿತೆ ಮಾತ್ರ ಅಲ್ಲ. ಜೀವನ ಪ್ರೀತಿಯನ್ನು ಕಟ್ಟಿಕೊಡುವ ರೀತಿ ವಿಭಿನ್ನವಾಗಿದೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE