ಇಲ್ಲಿರುವ ಕವಿತೆಗಳು ನಮ್ಮಲ್ಲಿ ಬಿಡಿಸಿ ಹೋಗುವ ಚಿತ್ರ, ನಿಧಾನಕ್ಕೆ ವಿಸ್ತಾರವಾಗುತ್ತಾ, ಬೇರೆ ಬೇರೆ ಆಕಾರಗಳನ್ನು ಪಡೆದುಕೊಳ್ಳುತ್ತಾ ನಮ್ಮನ್ನು ಚೋದ್ಯಕ್ಕೆ ಒಳಪಡಿಸುತ್ತದೆ. “ಕಣ್ಣ ರೆಪ್ಪಗೆ ಕನಸೊಂದ ಮೆತ್ತಿಕೊಂಡ ಮುಖ ನಿದ್ದೆಯಲ್ಲೂ ಬೆಳಗಿರುತ್ತದೆ...” ಹೆಣ್ಣಿನ ಜೀವಂತಿಕೆ ಮತ್ತು ಸೂಕ್ಷ್ಮತೆಯ ಕಟ್ಟಿಕೊಡುವ 'ನಿದ್ದೆ ಚಿತ್ರ', ನರ್ತನದ ತನ್ಮಯತೆಯನ್ನು ಕಡಿಸಿದ ಫೋಟೋಗ್ರಾಫರನ ಫ್ಲಾಶ್, ಸಂಭ್ರಮದ ಮಿಥುನ ಹಕ್ಕಿಯ ಕಡವಿದ ಬಾಣಕ್ಕೆ ಹೋಲಿಸುವ ಕವಯಿತ್ರಿ, ಕಾಲನ ಹರಿವನ್ನು ಪ್ರೇಮದ ತಲ್ಲೀನತೆಯಲ್ಲಿ ತಡೆದು ನಿಲ್ಲಿಸುವ ಭರವಸೆಯನ್ನು ಹೊಂದಿದ್ದಾರೆ. ಇಲ್ಲಿರುವ ಎಲ್ಲ ಕವಿತೆಗಳೂ ಆ ಪ್ರೇಮರಾಹಿತ್ಯದ ಭರವಸೆಯಿಂದಲೇ ಒಡಮೂಡಿದವುಗಳು. ತನಗೆ ಹಸಿವಿನ ಪಾಠವನ್ನು ಹೇಳಿಕೊಡುತ್ತಾ, ಲತೆಯನ್ನು ಕಲ್ಲಾಗಿಸಿದ ತಾಯಿದೇವಿಯ ಬಗೆಯನ್ನು ವಿಶಿಷ್ಟವಾಗಿ ನಿರೂಪಿಸುತ್ತಾರೆ ಕವಯಿತ್ರಿ, ಕಿ.ರಂ.ನ ಚಿತ್ರವನ್ನು ಕವಿತೆಯಲ್ಲಿ ಹಿಡಿದಿಡುವ ಪ್ರಯತ್ನ ಆಪ್ತವಾಗಿದೆ. ಪಯಣದ ಪಯಣ ಕವಿತೆ ಮನಸ್ಸನ್ನು ಬೆಚ್ಚಗಾಗಿಸುವ ಇನ್ನೊಂದು ಅನುಭವ. 'ನಿಲ್ಲಿಸಿ' ಎಂಬೊಂದು ಸೂಚನೆಯ ಉಸರದೇ ಚಂಗನೆ ರಿಕ್ಷಾದಿಂದ ನೆಗೆದವಳ ಸೆಳೆದದ್ದೇನು? ಎನ್ನುವ ಪ್ರಶ್ನೆ, ಕವಿತೆಯನ್ನು ನಮ್ಮೊಳಗೇ ಬೆಳೆಸುತ್ತಾ ಹೋಗುತ್ತದೆ ಅಕ್ಷತಾ ಸಾರ್ವಜನಿಕ ಜೀವನದಲ್ಲಿ ಹಾಗೂ ಒಂದು ವಿಶಾಲ ಅರ್ಥದಲ್ಲಿ ಸಾರ್ವಜನಿಕ ರಾಜಕಾರಣದಲ್ಲಿ ತೊಡಗ ಬಯಸುವ ಸೂಕ್ಷ್ಮಜೀವಿಯಾದುದರಿಂದ, ಆ ಹಿನ್ನೆಲೆ ಸಂಬಂಧವನ್ನು ಮುನ್ನುಡಿಯಲ್ಲಿ ವಿಮರ್ಶಕ ನಟರಾಜ್ ಹುಳಿಯಾರ್ ಬರೆಯುತ್ತಾರೆ.
ಅಕ್ಷತಾ ಹುಂಚದಕಟ್ಟೆ ಅವರು ಹುಟ್ಟಿದ್ದು 1980ರಲ್ಲಿ, ತೀರ್ಥಹಳ್ಳಿ ತಾಲೋಕಿನ ಪುಟ್ಟ ಗ್ರಾಮ ಹುಂಚದಕಟ್ಟೆಯ ಕೆ.ವಿ.ಕೃಷ್ಣಮೂರ್ತಿಯವರ ಮೊದಲ ಮಗಳು. ತಾಯಿ ಶೈಲಾ ಅವರಿಂದ ಸಾಹಿತ್ಯಾಭಿರುಚಿ ಹತ್ತಿಸಿಕೊಂಡ ಅಕ್ಷತಾ, ಕನ್ನಡ ಸಾಹಿತ್ಯಲೋಕದಲ್ಲಿ ಲೇಖಕಿಯಾಗಿ, ಪ್ರಕಾಶಕಿಯಾಗಿ ತಮ್ಮದೇ ಹೆಸರು ಗಳಿಸಿದ್ದಾರೆ . ಅಕ್ಷತಾ ಕೆ. ಎಂಬ ಹೆಸರಿನಲ್ಲಿ ಪರಿಚಿತರಾದ ಇವರು ಈಗ ಸಾಹಿತ್ಯ ವಲಯಕ್ಕೆ ಅಕ್ಷತಾ ಹುಂಚದಕಟ್ಟೆ ಎಂದೇ ಚಿರಪರಿಚಿತರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದಿದ ಅವರು, ಅಲ್ಲಿನ ಸಾಹಿತ್ಯಿಕ ವಾತಾವರಣದಿಂದ ಪ್ರೇರೇಪಣೆಗೊಂಡು ಕವಿತೆ ಬರೆಯಲು ಶುರುಮಾಡಿದರು. ಅಕ್ಷತಾ ಕಾಲೇಜುದಿನಗಳಲ್ಲೇ ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಪ್ರಶಸ್ತಿ ಪಡೆದವರು, ‘ರೆಕ್ಕೆ ಬಿಚ್ಚಿ ...
READ MORE