‘ನೀಲು ಕಾವ್ಯ ಸಂಗ್ರಹ-1’ ಕನ್ನಡದ ಬಹುಮುಖ್ಯ ಬರಹಗಾರ, ಪತ್ರಕರ್ತ ಪಿ. ಲಂಕೇಶ್ ಅವರ ಕವಿತೆಗಳ ಸಂಕಲನ. ತಮ್ಮದೇ ಪತ್ರಿಕೆಯಲ್ಲಿ ನೀಲು ಎಂಬ ಕಾವ್ಯ ನಾಮದಿಂದ ಲಂಕೇಶ್ ಬರೆಯುತ್ತಿದ್ದ ಚಿಕ್ಕ ಚಿಕ್ಕ ಕವಿತೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದವು. ಒಂದೇ ಸಮಯಕ್ಕೆ ಪ್ರೇಮ, ತತ್ವಪದ, ರಾಜಕೀಯದ ವಿಶ್ಲೇಷಣೆ ಎಲ್ಲವುಗಳ ಕುರಿತಾಗಿ ಅತ್ಯಂತ ನಾಜೂಕಿನಿಂದ ರಚಿಸಲ್ಪಡುತ್ತಿದ್ದ ನೀಲು ಪದ್ಯಗಳು ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ಅಸ್ಮಿತೆಯನ್ನು ಉಳಿಸಿಕೊಂಡಿವೆ. ಹೊಸ ಪ್ರಕಾರವಾಗಿಯೇ ಹೊರಹೊಮ್ಮಿವೆ ಇಂತಹ ಕವಿತೆಗಳ ಮೊದಲ ಸಂಗ್ರಹ ಈ ಕೃತಿ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE