‘ನೀ ಮರೆಯಾದ ಕ್ಷಣಗಳು’ ಬಸವರಾಜ ಎಸ್. ಕಲೆಗಾರ ಅವರ ಕವನ ಸಂಕಲನ. ಕಾವ್ಯದಿಂದ ಕಲೆ, ಕಲೆಯಿಂದ ಕಾವ್ಯ ಹುಟ್ಟುತ್ತದೆ ಎಂಬುದು ಜಿಜ್ಞಾಸೆ. ಆದರೆ ಇವೆರಡೂ ಗುಣಗಳು ಬಸವರಾಜ ಎಸ್. ಕಲೆಗಾರರಿಗೆ ಒಲಿದಿದೆ ಎನ್ನುತ್ತಾರೆ ಡಾ. ಗಾಳೆಪ್ಪ ಪೂಜಾರಿ.
ಮನದಾಳದಲ್ಲಿ ಸಂವೇದನೆಗಳು ಪುಟಿದಾಗ ಕವಿತೆ ಮೂಡಿ ಬರುತ್ತದೆ ಎಂಬುದಕ್ಕೆ ಬಸವರಾಜರ ಕೆಲವು ಕವಿತೆಗಳು ಸಾಕ್ಷಿಯಾಗಿವೆ. ವಯೋಗುಣಕ್ಕೆ ತಕ್ಕಂತೆ ಅಲ್ಲಲ್ಲಿ ಪ್ರೇಮ ಕವಿತೆಗಳು ಕಂಡು ಬಂದರೂ ತನ್ನ ಮಿತಿಯೊಳಗೆ ಓರಿಗೆಯವರಿಗೆ ನೀತಿ ಬೋಧಿಸುವ ಕಾರ್ಯ ಕಾವ್ಯದ ಮೂಲಕ ಮಾಡಿರುವುದು ಗಮನಾರ್ಹ. ಕವಿ ತನ್ನಲ್ಲಿರುವ ಕನ್ನಡನಾಡಿನ ಅಭಿಮಾನಕ್ಕೆ ಶಬ್ದದ ಆಭರಣ ತೊಡಿಸಿದ್ದಾರೆ. ಇಲ್ಲಿಯ ಕವಿತೆಗಳಲ್ಲಿ ವ್ಯವಸ್ಥೆಯ ಅಧೋಗತಿಗೆ ಸಿಟ್ಟಿದೆ, ಬೇಸರವಿದೆ, ಅಸಹಾಯಕತೆ ಇದೆ. ಯಾಂತ್ರಿಕತೆಯನ್ನು ಹೆಚ್ಚು ಅಪ್ಪಿಕೊಳ್ಳುತ್ತಿರುವ ಮನುಷ್ಯರಿಗೆ ಕಾವ್ಯದ ಪ್ರಸ್ತುತತೆಯನ್ನು ಕಲೆಗಾರ ಪ್ರಕಟ ಪಡಿಸಿದ್ದಾರೆ.
ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...
READ MORE