ಕವಿ ಹಾಗೂ ಲೇಖಕ ನರಸಿಂಗರಾವ್ ಹೇಮನೂರು ಅವರ ಕೃತಿ-ಇಂದ್ಯಾಕ ಬಂದಿ. ಒಟ್ಟು 45 ಕವನಗಳನ್ನು ಒಳಗೊಂಡಿದೆ. ‘ಎಲ್ಲಿರುವುದು ಭಾವೈಕ್ಯತೆಯು, ಎಲ್ಲುಳಿದಿದೆ ಗೆಳೆತನವು, ಎಲ್ಲೆಲ್ಲಿಯೂ ಭ್ರಾಂತಿಯ ನುಡಿ, ಹೆಚ್ಚಿದೆ ಹಗೆತನವು’ ಇಂತಹ ಸಾಲುಗಳ ಮೂಲಕ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. ಮನೆಯು ಖಾಲಿಯಾಗಿದೆ. ನಾನು ನಾನಾಗಲಿಲ್ಲ, ಬೆಳ್ಳಿ ಹಬ್ಬ, ಕಣ್ಣೀಗಿ ನಿದ್ದಿಯಿಲ್ಲ, ನಾ ಭಾಳ ಖೋಡಿ ಹುಡುಗ, ಇಂದ್ಯಾಕ ಬಂದಿ ಇಂತಹ ಶೀರ್ಷಿಕೆಯ ಕವನಗಳು ಆಡುಭಾಷೆಯಲ್ಲಿ ಬರೆದಿದ್ದು, ಕಾವ್ಯಾಂಶದ ದೃಷ್ಟಿಯಿಂದ ಚಿಂತನೆಗೀಡು ಮಾಡುತ್ತವೆ.
ಹಿರಿಯ ಕವಿ ಎ.ಕೃಷ್ಣ ಸುರಪುರ ಅವರು ಕೃತಿಗೆ ಮುನ್ನುಡಿ ಬರೆದು `ಕವಿಯು ತಮ್ಮ ಜೀವನಾನುಭವದ ಎಲ್ಲ ಸ್ತರದ ಸಿಹಿ-ಕಹಿಗಳನ್ನು ತಮ್ಮ ಪ್ರಾಮಾಣಿಕ ಪ್ರಯತ್ನದ ರಚನೆಗಳ ಮೂಲಕ ಹೊರಹಾಕಿದ್ದಾರೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಪಾ.ವಿ. ಅರಕೇರಿ ಅವರು ಕೃತಿಗೆ ಬೆನ್ನುಡಿ ಬರೆದು ‘ಕವಿಯ ವೈವಿಧ್ಯಮಯ ಸೃಜನಶೀಲ ಪ್ರಕ್ರಿಯೆಗಳಿಗೆ ಇಲ್ಲಿಯ ಕವಿತೆಗಳು ಸಾಕ್ಷಿಯಾಗಿ ನಿಲ್ಲುತ್ತವೆ’ ಎಂದು ಶ್ಲಾಘಿಸಿದ್ದಾರೆ. .
ಬೆಂಗಳೂರಿನ ಪತ್ರಿಕಾ ಮಾಧ್ಯಮದ ‘ವಾರದ ಸ್ಫೋಟ’ ದವರು ಈ ಕವನ ಸಂಕಲನಕ್ಕೆ ಅತ್ಯುತ್ತಮ ಕವನ ಸಂಕಲನ ಎಂದು ‘ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ (2006) ನೀಡಿದ್ದಾರೆ.
ಲೇಖಕ ನರಸಿಂಗರಾವ್ ಹೇಮನೂರು ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು., ತಂದೆ ಮೋನಪ್ಪ ತಾಯಿ ಅಯ್ಯಮ್ಮ. ಬಿ.ಎ, ಡಿಪ್ಲೊಮಾ ಇನ್ ಸೆಕ್ರಟೆರಿಯಲ್ ಪ್ರಾಕ್ಟಿಸ್, ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದಲ್ಲಿ ದೇಶದ ವಿವಿಧೆಡೆ ಸೇವೆ ಸಲ್ಲಿಸಿ, ಆ ಕಂಪನಿಯ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ತದನಂತರ ಸೇಡಂನಲ್ಲಿಯ ಸೌತ್ ಇಂಡಿಯಾ ಸಿಮೆಂಟ್ ನಲ್ಲಿಯೂ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ಕೆಲಸ ಮಾಡಿ, ನಂತರ ನಿವೃತ್ತರಾಗಿದ್ದಾರೆ. ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಸೇಡಂನಲ್ಲಿಯ ನೃಪತುಂಗ ಅಧ್ಯಯನ ಸಂಸ್ಥೆಯ ಸ್ಥಾಪಕ ಸದಸ್ಯರು, ತಿಂಥಿಣಿಯ ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ...
READ MORE