ರಾಜ್ಯದ ವಿವಿಧೆಡೆಯ ಕವಿಗಳಿಂದ ತರಿಸಿಕೊಂಡಿರುವ ಕವನಗಳ ಸಂಗ್ರಹವಿದು-ನವ್ಯಧ್ವನಿ. ವಿನಾಯಕ (ವಿ.ಕೃ.ಗೋಕಾಕ ) ಹಾಗೂ ಚನ್ನವೀರ ಕಣವಿ ಅವರು ಸಂಪಾದಿಸಿದ್ದಾರೆ. ಸಾಂಪ್ರದಾಯಿಕ ಕವನಗಳ ಜಾಡು ಹಿಡಿದು ಬರೆದ ಕವನಗಳಲ್ಲವಾದ್ದರಿಂದ ಈ ಕವನ ಸಂಕಲನವು ಒಂದು ನವ್ಯವನ್ನು ಧ್ವನಿಸುತ್ತದೆ. ಆದ್ದರಿಂದ, ಈ ಕೃತಿಗೆ `ನವ್ಯಧ್ವನಿ’ ಶೀರ್ಷಿಕೆ ನೀಡಲಾಗಿದೆ.
ಅಂಬಿಕಾತನಯದತ್ತ, ಜಿ.ಎಸ್.ಶಿವರುದ್ರಪ್ಪ, ಗೋಪಾಲಕೃಷ್ಣ ಅಡಿಗ, ರಾಮಚಂದ್ರ ಶರ್ಮ, ಗಂಗಾಧರ ಚಿತ್ತಾಲ, ಎಂ. ಅಕಬರ ಅಲಿ, ಶಾಂತಿನಾಥ ದೇಸಾಯಿ, ಸು.ರಂ.ಎಕ್ಕುಂಡಿ, ವಿನಾಯಕ, ಚನ್ನವೀರ ಕಣವಿ ಮುಂತಾದವರ ಒಟ್ಟು 30 ಕವನಗಳಿವೆ. ಯಾವ ಪದ್ಧತಿಯಾದರೂ ಕಾವ್ಯವು ಕಾವ್ಯವೇ ಆಗಿದೆ. ಯಾವುದೇ ಕವಿಯು ಈ ದಾರಿಯನ್ನು ತುಳಿಯಬಹುದು. ಕಾವ್ಯದ ಅನೇಕ ತಂತ್ರಗಳಲ್ಲಿ ನವ್ಯತೆಯೂ ಒಂದು ತಂತ್ರ. ನವ್ಯದಲ್ಲಿ ಗೊಂದಲ ಇದೆ. ತಪ್ಪು ತಿಳಿವಳಿಕೆ ಇದೆ ಎಂದು ಹೇಳಲಾಗುತ್ತಿದೆ. ಬೇಂದ್ರೆ ಅವರು ಈ ನವ್ಯ ಕಾವ್ಯಗಳ ಬಗ್ಗೆ ಆಗಾಗ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೆ-ಅದು ನವ್ಯತೆ (ನವ್ಯದೃಷ್ಟಿ) ಕುರಿತು ಅಲ್ಲ; ನವ್ಯತೆಯ ಹೆಸರಿನಲ್ಲಿ ಪ್ರಕಟವಾಗುವ ಅಪೂರ್ಣದೃಷ್ಟಿಯನ್ನು ಕುರಿತು ಎಂದು ವಿನಾಯಕರು ತಾವು ಬರೆದ ಮುನ್ನುಡಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
1956ರಲ್ಲಿ ಮೊದಲು, ನಂತರ 1969ರಲ್ಲಿ, ಈ ಕೃತಿಯನ್ನು ಬೆಂಗಳೂರಿನ ವಿಜಯ ಭಾರತಿ ಪ್ರಕಾಶನವು ಪ್ರಕಟಿಸಿತ್ತು.
‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅನಂತರ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...
READ MORE