ಕವಿ ಯಲ್ಲಪ್ಪ ಎಮ್ ಮರ್ಚೆಡ್ ಅವರ ಕವನ ಸಂಕಲನ ’ನವಿಲು ಕುಣಿದಾವ’. ಈ ಕೃತಿಗೆ ಮುನ್ನುಡಿ ಬರೆದ ಚಂದ್ರಕಾಂತ ಕರದಳ್ಳಿ, ’ಓದು ಬರಹವೆಂದರೆ ಬರಿ ಅಕ್ಷರ ಕಲಿಸುವುದಲ್ಲ, ಕಲಿತ ಅಕ್ಷರದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಸರಿ-ತಪ್ಪುಗಳನ್ನು ಅರಿಯುವುದು ತಮ್ಮ ಕಾಲ ಮೇಲೆ ತಾವು ನಿಲ್ಲುವುದು, ಬಡತನದ ಬವಣೆಯಲ್ಲೂ ಬದುಕಿನ ಭಾಗ್ಯವನ್ನು ಓದಿನ ಮೂಲಕ ಕಂಡುಕೊಳ್ಳುವುದು ಇಲ್ಲಿನ ಕಥೆಗಳ ಮುಖ್ಯ ಆಶಯವಾಗಿದೆ. ಇದು ಯಲ್ಲಪ್ಪ ಎಮ್ ಮರ್ಚೆಡ್ ಮಾಡಿದ ಸಾರ್ಥಕ ಕೆಲಸ,ಇಂಥ ಸಾರ್ಥಕ ಕೆಲಸವನ್ನು ನೋಡಿಯಾದರೂ ನಮ್ಮ ಶಾಲಾ ಆಸಕ್ತ ಶಿಕ್ಷಕರು ಭಾಷೆಯಲ್ಲಿ ಅಷ್ಟೇ ಅಲ್ಲ, ಐಚ್ಛಿಕ ವಿಷಯಗಳಲ್ಲೂ ಕೂಡ ಸಾಧನೆ ಮಾಡಬಹುದಾಗಿದೆ. ಸಮಾಜ ಸುಧಾರಕರ, ಸ್ವಾತಂತ್ರ ಹೋರಾಟಗಾರರ, ವಿಜ್ಞಾನಿಗಳ ಆವಿಷ್ಕಾರ, ಐತಿಹಾಸಿಕ ಪುರುಷರ ಜೀವನಾನುಭವಗಳನ್ನು ಮಕ್ಕಳ ಮುಂದಿರಿಸಿ ಅವುಗಳ ಆಧಾರದ ಮೇಲೆ ಮಕ್ಕಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಲಿ.’ ಎಂದು ಆಶಿಸಿದ್ದಾರೆ.
ಲೇಖಕ ಯಲ್ಲಪ್ಪ ಎಂ. ಮರ್ಚೇಡ್ ಅವರು ಮೂಲತಃ ರಾಯಚೂರು ತಾಲೂಕಿನ ಜಾಗೀರ್ ಮರ್ಚೇಡ್ ಗ್ರಾಮದವರು. ತಾಯಿ ಹುಸೇನಮ್ಮ. ತಂದೆ ಅಂಜಿನಯ್ಯ ಮ್ಯಾತ್ರಿ. ಮರ್ಚೇಡ್ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ, ಜೇಗರಕಲ್ ಗ್ರಾಮದಲ್ಲಿ ಪ್ರೌಢಶಿಕ್ಷಣ, ರಾಯಚೂರಿನಲ್ಲಿ ಪಿಯುಸಿ, ಕಲಬುರಗಿಯಲ್ಲಿ ಡಿ.ಇಡಿ, ರಾಯಚೂರಿನಲ್ಲಿ ಬಿ.ಎ. ಪದವೀದವಿ ಪಡೆದರು. 2012ರಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಜೊತೆಗೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದಿಂದ ಎಂ.ಎ. (2015) ಪೂರ್ಣಗೊಳಿಸಿದರು. ಕೃತಿಗಳು: 2013ರಲ್ಲಿ ಅವರ ಚೊಚ್ಚಲ ಕವನ ಸಂಕಲನ- "ಮಡಿಲು", ಬಣ್ಣದ ಗುಬ್ಬಿ (ಶಿಶು ಗೀತೆಗಳ ಸಂಕಲನ), ’ವಚನ ಪ್ರಭೆ’ (ಆದುನಿಕ ವಚನಗಳ ಸಂಕಲನ), ’ಕನಸೊಂದು ಕಣ್ಮರೆ’ (ಕವನ ಸಂಕಲನ) ಪ್ರಕಟವಾಗಿದೆ. ...
READ MORE