ನಾವಿಬ್ಬರೇ ಗುಬ್ಬಿ

Author : ವಿಕ್ರಮ ಬಿ.ಕೆ

Pages 84

₹ 100.00




Year of Publication: 2023
Published by: ತ್ರಿಲೋಕ ಬರಹ
Address: ತ್ರಿಲೋಕ ಬರಹ 008, ಡಿ ಎಸ್ ಮ್ಯಾಕ್ಸ್ ಸಂಕಲ್ಪ ತುರಹಳ್ಳಿ ಸುಬ್ರಮಣ್ಯಪುರ ಪೋಸ್ಟ್ಬೆಂಗಳೂರು

Synopsys

ನಾವಿಬ್ಬರೇ ಗುಬ್ಬಿ ವಿಕ್ರಮ ಬಿ.ಕೆ ಅವರ ಕವನಸಂಕಲನವಾಗಿದೆ. ಪದ್ಯಗಳಲ್ಲಿ ಬಗೆ ಬಗೆಯ ಮಂದಿಯ ಮನಸುಗಳು ಮಾತಾಡಿವೆ. ನೆನಪುಗಳು ಹಲವು ಹೆಪ್ಪುಗಟ್ಟಿವೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಒಂದಷ್ಟು ಪದ್ಯಗಳು ಹೊಸ ಹೊಸ ಹೊಳಹು ನೀಡುತ್ತವೆ. ನಮ್ಮ ಸುತ್ತಲಿರುವ ಒಂದು ಜೀವವು ನಮಗೆ ಸದ್ದಿಲ್ಲದೇ ಬದುಕುವುದನ್ನು ತೋರಿಸುತ್ತಿರುತ್ತದೆ, ಕಲಿಸುತ್ತಿರುತ್ತದೆ. ಇಲ್ಲಿನ ಬೇರೆ ಬೇರೆ ಆಳುಗಳ ಕುರಿತ ಪದ್ಯಗಳು ನಮಗೆ ಅಂತಹವರ ಪರಿಚಯ ಮಾಡಿಕೊಡುತ್ತವೆ. ಪದ್ಯಗಳಲ್ಲಿನ ಡೊಂಕನ್ನು ನೋಡುವ ಮತ್ತು ರೊಚ್ಚಿನಿಂದ ಕೇಳಿ ಕೇಳುವ, ತಿದ್ದಲು ನೋಡುವ ಗುಣ ಹಿಡಿಸಿತು. ನಮ್ಮ ಕೂಡಣದಲ್ಲಿರುವ ಜೊತೆಯಲ್ಲಿನ ಉಸಿರುಗಳನ್ನು ಕಂಡು, ಅವುಗಳ ಮನವರಿತು, ಇನ್ನೊಬ್ಬರಿಗೆ ಕಾಣಿಸಲು ಮಾಡುತ್ತಿರುವ ವಿಕ್ರಮನ ಕೆಲಸ ಇನ್ನಷ್ಟು ಚುರುಕಾಗಿ, ಯಾವಾಗಲೂ ನಡೆಯುತ್ತಿರಲಿ. ವಿಕ್ರಮನ ಕವನ ಲೋಕದ ಈ ಮೊದಲ ಹೆಜ್ಜೆಯು ಅವನ ಮುಂದಿನ ಹೆಜ್ಜೆಗಳತ್ತ ನನ್ನನ್ನು ಸೆಳೆದಿದೆ. ಪ್ರವೀಣ್ ಕುಮಾರ್ ಜಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿಕ್ರಮ ಬಿ.ಕೆ

ಬಳ್ಳಾರಿ ಸೀಮೆಯ ಈಗಿನ ವಿಜಯನಗರ ಜಿಲ್ಲೆಯ ಹೊಸಪೇಟೆ ಕಡೆಯವರು. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ಓದಿ, ತಮ್ಮ ಓಣಿಯ ಮತ್ತು ಕುಟುಂಬದಲ್ಲೇ ಮೊದಲ ಎಂಜಿನಿಯರಿಂಗ್ ಪದವಿ ಪಡೆದವರು. Sales and marketing ನಲ್ಲಿ ಜನರೊಂದಿಗೆ ಹೆಚ್ಚು ಬೆರೆಯಬಹುದು ಎಂದು ತಿಳಿದು ಅದೇ ಪ್ರೊಫೆಷನ್ನಲ್ಲಿ career ಬೆಳೆಸುತ್ತಾ NMIMS ಕಾಲೇಜಿನಲ್ಲಿ MBA in General Management ಪದವಿಯನ್ನು ಪಡೆದರು. 8 ವರ್ಷಗಳ ಕಾಲ ಸಮಕಾಲೀನ ನೃತ್ಯ ಪ್ರಕಾರವನ್ನು Attakkalari centre for movement arts ನಲ್ಲಿ ಕಲೆತು, ಒಟ್ಟಾರೆ ಸ್ಟೇಜ್ ಮೇಲೆ ನೂರಕ್ಕೂ ಹೆಚ್ಚು ಪ್ರದರ್ಶನ ಕೊಟ್ಟಿದ್ದಾರೆ. Beru ...

READ MORE

Related Books