ನನ್ನೊಳಗಿನ ಭಾವ

Author : ಪೂರ್ಣಿಮಾ ಸುರೇಶ್

Synopsys

‘ನನ್ನೊಳಗಿನ ಭಾವ’ ಕೃತಿಯು ಪೂರ್ಣಿಮಾ ಸುರೇಶ್ ಅವರ ಕವನಸಂಕಲನವಾಗಿದೆ. ಕೃತಿಗೆ ಅಕ್ಷತೆ ಬರೆದಿರುವ ಎಂ. ಎನ್ ವ್ಯಾಸರಾವ್ ಅವರು, ಪೂರ್ಣಿಮಾ ಸುರೇಶ್ ಅವರ ನನ್ನೊಳಗಿನ ಭಾವ' ಕವನ ಸಂಕಲನ ಹೊರಬರುತ್ತಿರುವುದು ಸಂತೋಷ ತಂದಿದೆ. ನವಿರಾದ ಭಾವನೆಗಳಿಗೆ ನುಡಿಯ ಸ್ವಭ ಕೊಟ್ಟ ಕನಸಿನ ಲೋಕವನ್ನು ತೆರೆದಿದ್ದಾರೆ. ಕಾವ್ಯ ಹುಟ್ಟುವುದು ಮನಸ್ಸಿನಲ್ಲಿ, ಅದು ಮಾಗುವುದು ಬುದ್ಧಿ ಭಾವಗಳಲ್ಲಿ, ಅದರ ವಿಸ್ತಾರ ಆಕಾಶದ ಹಾಗೆ ಕೊನೆ ಇಲ್ಲದ್ದು, ದಿಗಂತದ ಅಂಚಿನಲ್ಲಿ ಮೂಡುವ ಹೊನ್ನ ಬೆಳಕಿನ ರತ್ನ ಕಣ್ಣಿಗೆ ಇರಿಯದೆ ಹಿತವಾದ ಮಿಂಚುಗಳನ್ನು ಮಿನುಗಿಸುತ್ತದೆ. ಇಲ್ಲಿಯ ಕವನಗಳು ಹೊನ್ನ ಬೆಳಕಿನ ರಶ್ಮಿ ಎನ್ನಬಹುದು. ಓದು, ಕಲಿಕೆ, ಅಧ್ಯಯನ, ಅನುಭವ, ಲೋಕನೀತಿ, ಲೋಕರೂಢಿ, ಬಾಲ್ಯದ ನೆನಪು, ಯೌವನದ ಕಚಗುಳಿ, ಇವುಗಳ ಪಾಶವೇ ಕಾವ್ಯದ ಹುಟ್ಟು, ಅವರವರ ಗ್ರಹಿಕೆ, ಅವರವರ ಪ್ರತಿಭೆಗೆ ತಕ್ಕ ರೂಪ ಪಡೆಯುತ್ತವೆ. ಪೂರ್ಣಿಮಾ ಅವರು ಅಮಾವಾಸ್ಯೆ ಕಳೆದ ಪ್ರತಿಪದದ ಚಂದಿರನ ಕೋರೆ ಬೆಳಕಲ್ಲ. ತುಂಬು ಚಂದಿರನ ಬೆಳದಿಂಗಳ ಹಾಗೆ, ಪೂರ್ಣ ಆವರಿಸಿಕೊಳ್ಳುವ ನಿಟ್ಟಿನಲ್ಲಿ ಕಾವ್ಯ ರಚನೆಗೆ ತೊಡಗಿದ್ದಾರೆ. ಇಲ್ಲಿನ ಅನೇಕ ಕವನಗಳು ಕನಸನ್ನು ಕುರಿತದ್ದು. ಕನಸಿಗೆ ಫ್ರಾಯ್ಡ್ ಕೊಡುವ ಅರ್ಥಗಳೇ ಬೇರೆ, ಮನಃಶಾಸ್ತ್ರಜ್ಞರ ವಿವರಗಳೇ ಬೇರೆ. ಕವಿಯ ಅರ್ಥವೇ ಬೇರೆಯಾಗುತ್ತದೆ. ಇಲ್ಲಿ 'ಕನಸು' ಕಾಣುವುದು ನೆನಪಿನ ಆಳದಲ್ಲಿ ಕಲಕಿದ ಭಾವದಿಂದಾಗಿ, ಮುಂದಿನ ಬದುಕಿನ ಆಶಯ ಕಾಣುವ ಸಲುವಾಗಿ, ಆದ್ದರಿಂದ ಈ ಕನಸುಗಳಿಗೆ ಬೇರು, ರೆಂಬೆ, ಹೂವುಗಳು ಇವೆ. ಬಹಿರಂಗದ ಬದಲಾವಣೆಗಳು ಕಣ್ಣಿಗೆ ಕಾಣಿಸುತ್ತವೆ. ಅಂತರಂಗದ ಬದಲಾವಣೆ ಹೋರಾಟ ಕಣ್ಣಿಗೆ ಎಟಕುವುದಿಲ್ಲ ಎಂದಿದ್ದಾರೆ. ಪೂರ್ಣಿಮಾ ಅವರ ಆಶಯವಿರುವುದು 'ಪರಿಪೂರ್ಣದೆಡೆಗೆ ಅಮೂರ್ತ ಮೂರ್ತರೂಪಕ ಪರಿವರ್ತನೆಗೊಳಿಸಲಿ ಪರಿಪೂರ್ಣದೆಡೆಗೆ ಈ ಆಶಯದ ದಿಕ್ಕಿನಲ್ಲಿ ಸಾಗುತ್ತಿರುವುದಕ್ಕೆ ಇಲ್ಲಿನ ಹಲವಾರು ಕವನಗಳು ಭವ ನೀಡುತ್ತವೆ. ಮೌನಿ. ಕಂದನೆಳೆದ ಚಿತ್ತು, ಅಂತರಂಗದ ಬಯಲಾಟ, ಗುಬ್ಬಿಯೊಳಗಿನ ಬ್ರಹ್ಮಾಂಡ – ಮುಂತಾದ ಕವನಗಳನ್ನು ಹೆಸರಿಸಬಹುದು ಎನ್ನುತ್ತಾರೆ.

About the Author

ಪೂರ್ಣಿಮಾ ಸುರೇಶ್

ಲೇಖಕಿ, ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡಕದವರು. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಕಿರುತೆರೆ, ನಾಟಕ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಇಪ್ಪತ್ತೈದು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ನಾಟಕದ ಬಿ ಗ್ರೇಡ್ ಕಲಾವಿದೆಯೂ ಆಗಿದ್ದಾರೆ. ಸಂಘಟಕಿ ಹಾಗೂ ನಿರೂಪಕಿಯಾಗಿರುವ ಅವರು ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಕನ್ನಡ ಮತ್ತು ಕೊಂಕಣಿ ಭಾಷೆಯ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಅವರ ‘ಸತ್ಯನಾಪುರದ ಸಿರಿ’ ನಾಡಿನುದ್ದಕ್ಕೂ ಸುಮಾರು 35 ಪ್ರದರ್ಶನಗಳನ್ನು ಕಂಡಿದೆ. ಕರ್ನಾಟಕದ ಪ್ರಶಸ್ತಿಗಳು : ಗ್ಲೋಬಲ್ ಸಿನಿ ...

READ MORE

Related Books