ಕವಿ ಅಕಬರ ಎ. ಸನದಿ ಅವರ ಮೂರನೇ ಕೃತಿ “ನನ್ನವಳಿಗಾಗಿ”. 111 ಮುಕ್ತಗಳನ್ನು ಸಂಕಲನವು ಒಳಗೊಂಡಿದೆ. ದಾಂಪತ್ಯದಲ್ಲಿನ ಪ್ರೀತಿ ಪ್ರೇಮಭರಿತ ಕವನಗಳು ಸಂಕಲನದ ಜೀವಾಳ. ಕುಟುಂಬ, ಸಂಸಾರ, ಸಮಾಜ ಇತ್ಯಾದಿ ವಿದ್ಯಮಾನಗಳು ಕಾವ್ಯ ವಸ್ತುಗಳನ್ನಾಗಿಸಿಕೊಂಡಿರುವ ಮುಕ್ತಕಗಳು, ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆ ದೃಷ್ಟಿಯಿಂದ ಎಚ್ಚರವನ್ನು ಕಾಯ್ದುಕೊಂಡಿವೆ.
ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ‘ಇಲ್ಲಿಯ ಕವನಗಳು ಓದುಗರ ಮನಸ್ಸನ್ನು ಮುದಗೊಳಿಸುತ್ತವೆ ಮತ್ತು ಹದಗೊಳಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಕವಿ ಅಕಬರ ಎ. ಸನದಿ ಅವರು ಬೆಳಗಾವಿ ತಾಲುಕಿನ ಶಿಂದೋಳ್ಳಿ ಗ್ರಾಮದವರು. ಸಂಕೇಶ್ವರದ ಹಿಂದೂಸ್ಥಾನ್ ಲೇಟೆಕ್ಸ್ ಕಾರ್ಖಾನೆಯಲ್ಲಿ ತಾಂತ್ರಿಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡ ಹೋರಾಟಗಾರರು. ಕೃತಿಗಳು: ನಮ್ಮ ದೇಶ ಭಾರತ, ಗಿಲ್ ಗಿಲ್ ಗೆಜ್ಜೆ, ಕರುನಾಡ ಸಿರಿ, ಹಾಗೂ ಚೆಲುವ ಕನ್ನಡ ನಾಡು (ಮಕ್ಕಳ ಕವನ ಸಂಕಲನಗಳು) ನನ್ನವಳಿಗಾಗಿ (ಪ್ರೇಮದ ಮುಕ್ತಕಗಳ ಸಂಕಲನ) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದು, ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ...
READ MORE