ಜೀವನದ ಏರಿಳಿತದ ಹಾದಿಯಲ್ಲಿ ಬರುವ ಸನ್ನಿವೇಶಗಳ ಅಂತರಾಳದ ಶೋಧನೆಗೆ ದನಿಯಾಗಿ ಇಲ್ಲಿಯ ಕವಿತೆಗಳು ಒಡಮೂಡಿವೆ. ವೈಜ್ಞಾನಿಕವಾಗಿ ಪ್ರತಿಯೊಬ್ಬರಿಗೂ ಕನಸುಗಳು ಬಿದ್ದೇ ಬೀಳುತ್ತವೆ ;ಆದರೆ ಇವುಗಳು ಕೆಲವರಿಗೆ ನೆನಪಿನಲ್ಲಿ ಉಳಿದರೆ, ಇನ್ನೂ ಕೆಲವರಿಗೆ ನೆನಪಿಗೇ ಬರುವುದಿಲ್ಲ. ಇಂತಹ ಕನಸುಗಳನ್ನೇ ಅಕ್ಷರ ರೂಪಕ್ಕಿಳಿಸಿ ಓದುಗರಿಗೆ ಉಣಬಡಿಸುವ ಈ ಕೃತಿ ‘ನೆನಪುಗಳೇ ಹೀಗೆ’. ‘ಜಾತಿ' ಎಂಬ ಕವನದ ಸಾಲುಗಳು ಹೀಗಿವೆ. 'ಮನಸುಗಳು ಮೋಡಗಳಾಗಿ ಚಲಿಸಲಿ ಜಾತಿಯ ಜ್ವಾಲೆಯಾರಿಸುವ ಮಳೆಯಾಗಿ ಬರಲಿ ಹೊಮ್ಮಲಿ ಚಿಗುರು ರೋಗದ ಕೊರಡಿನಲಿ ಹೃದಯಗಳು ಮಮತೆಯ ಮಡಿಲಾಗಿ ತೆರೆಯಲಿ. ' ಈ ಸಾಲುಗಳು ಕವಿಯ ಪ್ರೀತಿಯ ಆಶಯವನ್ನು ಎತ್ತಿ ಹಿಡಿದಿವೆ. ಓದುಗರಿಗೆ ಅನುಕೂಲವಾಗಲೆಂದು ಅಂಚೆ ವೆಚ್ಚ ಸೇರಿ ಪುಸ್ತಕ ಮಾರಾಟ ಬೆಲೆಯನ್ನು 50.ರೂಗಳಿಗೆ ನಿಗದಿಪಡಿಸಿದ್ದಾರೆ ಪ್ರಕಾಶಕರು.
ಲೇಖಕ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ಅವರು ಮೂಲತಃ ತುಮಕೂರು ಜಿಲ್ಲಿಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದರ್ಗದವರು. ಹುಟ್ಟಿದ್ದು 1976 ಅಕ್ಟೋಬರ್ 24ರಂದು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವತ್ತ ಹೆಜ್ಜೆ ಹಾಕುತ್ತಿದ್ದು, ಗ್ರಾಮೀಣ ಬದುಕಿನ ಚಿತ್ರವನ್ನು ಹೆಕ್ಕಿ ತಮ್ಮ ಕೃತಿಗಳಲ್ಲಿ ನೈಪುಣ್ಯವಾಗಿ ಕಟ್ಟಿಕೊಡುತ್ತಾರೆ. ಅವರ ಮೊದಲ ಕವನ ಸಂಕಲನ ‘ಸಂಕೋಲೆ’ 2005ರಲ್ಲಿ ಪ್ರಕಟಣೆ ಕಂಡಿತು. ನಂತರ ‘ಕರುನಾಡಿಗೆನ್ನ ನಮನ, ನಾಡಪ್ರಭು ಕೆಂಪೇಗೌಡ ಮತ್ತು ಇತರ ನಾಟಕಗಳು, ಕನಸುಗಳು ಹೊತ್ತವರು ಹಾಗೂ ಇತರ ಕತೆಗಳು, ಹಳೇವೂರ ಮಡಿಲು, ಹುಲಿಯೂರ ಸೊಗಡು’ ಅವರ ಪ್ರಮುಖ ಕೃತಿಗಳು. ಪ್ರತಿ ತಿಂಗಳು ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದಾರೆ. ...
READ MORE