‘ನಾಕ ಹೊತ್ತ ಮಲ್ಲಿಗೆ ’ ಗುಂಡಣ್ಣ ಕಲಬುರ್ಗಿ ಅವರ ಕವನ ಸಂಕಲನವಾಗಿದೆ. ಹೊರ ಜಗತ್ತಿನ ವಿದ್ಯಮಾನಗಳನ್ನು ಅವಲೋಕಿಸುತ್ತ ತನ್ನ ಒಳದನಿಯ ಮೂಲಕ ಶೋಧಿಸುತ್ತ ನಿಜದನಿಯನ್ನು ಮಾತ್ರ ಕವನಗಳನ್ನಾಗಿಸುವ ಕಲೆ ಈ ಕವನ ಸಂಕಲನದಲ್ಲಿ ಸಾಕಾರಗೊಂಡಿದೆ.
ಲೇಖಕ, ಕವಿ ಗುಂಡಣ್ಣ ಕಲಬುರ್ಗಿ ಅವರು ಮೂಲತಃ ಕಲಬುರ್ಗಿಯವರು. ಎಂಎ ಹಾಗೂ ಪಿ.ಎಚ್.ಡಿ ಪದವೀಧರರು. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕೃತಿಗಳು : ಎಲ್ಲಿ ಹೋದಳು ಈಕೆ (ಕವನ ಸಂಕಲನ) ...
READ MOREಹೊಸತು ಅಕ್ಟೋಬರ್- 2002
ಕನಕ ಸಾಹಿತ್ಯ ಪ್ರತಿಷ್ಠಾನ, ನಂ.೨೭೨, ೫ನೇ ಮುಖ್ಯರಸ್ತೆ, ೧ನೇ ಹಂತ, ಮಂಜುನಾಥನಗರ, ಬೆಂಗಳೂರು – ೧೦. ಹೊರ ಜಗತ್ತಿನ ವಿದ್ಯಮಾನಗಳನ್ನು ಅವಲೋಕಿಸುತ್ತ ತನ್ನ ಒಳದನಿಯ ಮೂಲಕ ಶೋಧಿಸುತ್ತ ನಿಜದನಿಯನ್ನು ಮಾತ್ರಕವನಗಳನ್ನಾಗಿಸುವ ಕಲೆ ಈ ಕವನ ಸಂಕಲನದಲ್ಲಿ ಸಾಕಾರಗೊಂಡಿದೆ. ಜೀವಕೋಟಿಗೆ ಬಂದೆರಗುವ ನಿಸರ್ಗದತ್ತ ಅಥವಾ ಸ್ವಯಂಕೃತ ನೋವು ನಲಿವುಗಳ ಬಗ್ಗೆ ಇಲ್ಲಿನ ನಿರೂಪಣೆಯು ಕವಿಯ ಮನಸ್ಸಿನ ಸೂಕ್ಷ್ಮತೆಯನ್ನು ತಿಳಿಸುತ್ತದೆ. ಸಂವೇದನಾಶೀಲ ಮನಸ್ಸುಗಳಿಗೆ ಈ ಕವನಗಳು ಬದುಕಿಗೂ-ಸಾಹಿತ್ಯಕ್ಕೂ ಇರುವ ಬಿಡಿಸಲಾಗದ ಗಾಢ ಸಂಬಂಧವನ್ನು ಮನವರಿಕೆ ಮಾಡಿಸುತ್ತವೆ.