‘ಮುಮ್ತಾಜಳ ಮಹಲು’ ಲೇಖಕಿ ಕೆ. ಫರೀಫಾ ಅವರ ನಲವತ್ಮೂರು ಕವಿತೆಗಳ ಸಂಗ್ರಹ. ಕವಿತೆಗಳ ಮೂಲಕ ವಿಶಿಷ್ಟವಾಗಿ ಹೊಸ ಅರ್ಥವನ್ನು, ಹೊಸ ದೃಶ್ಯವನ್ನು ಕಟೆದು ಓದುಗರ ಕಣ್ಣಮುಂದೆ ನಿಲ್ಲಿಸುತ್ತಾರೆ. ಕವಿತೆಗೆ ಪ್ರಾಸಗಳನ್ನು ಜೋಡಿಸುವ ಚಮತ್ಕಾರಿಕ ಕ್ರಿಯೆಯಲ್ಲ, ಕವಿತೆಗಳಲ್ಲಿ ತುಂಬಿರುವ ಹೊಸ ಭಾವವನ್ನು ಹೊಕ್ಕು ನೋಡುವಂತೆ ಪ್ರೇರೇಪಿಸುವ ಇವರ ಕ್ರಮ ವಿಶಿಷ್ಟ. ಮುಮ್ತಾಜಳ ಮಹಲು, ಅಕ್ಕನಿಗೊಂದು ಪ್ರಶ್ನೆ, ದ್ರೌಪದಿಯ ಪ್ರಶ್ನೆ, ಮಾನವರಾಗಿ, ಅನ್ವೇಷಣೆ, ಮೂಳೆಗಳೇ ಬನ್ನಿ, ಕಿಡಿ, ಉದಾರೀಕರಣ, ಜೇಡ ಮತ್ತು ಬಲೆ, ಪ್ರಶ್ನಿಸಲಿಲ್ಲವೇಕೆ- ಮುಂತಾದ ಕವಿತೆಗಳಲ್ಲಿ ಹೊಸ ಭಾವದ, ಒಂದು ಬಗೆಯ ಬಂಡಾಯದ ತುಡಿತವನ್ನು ಗುರುತಿಸಬಹುದು.
ಲೇಖಕಿ ಕೆ.ಷರೀಫಾ ಅವರು 1957 ಮೇ 05ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ. ಬಿಡುಗಡೆಯ ಕವಿತೆಗಳು, ನೂರೇನ್‌ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು. ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ. ...
READ MORE