‘ಮುಗಿಲ ಹಕ್ಕಿಯ ನೆಲದ ಹಾಡು’ ಕೃತಿಯು ಮೈಲಾರಪ್ಪ ಬೂದಿಹಾಳ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಹನಿ ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ರಾಶಿ ಈ ಮಾತು ನೆನಪಾಗುವಂತೆ ಮಾಡುವ ಚುಂಬಕ ರಚಿಸಿದ್ದು, ಈಗಾಗಲೇ ‘ದಾಟಬೇಡ ಹೊಸ್ತಿಲು’ ಕವನ ಸಂಕಲನದ ಮೂಲಕ ಕರುನಾಡಿನ ಸಾರಸ್ವತಲೋಕದಲ್ಲಿ ಭರವಸೆ ಮೂಡಿಸಿರುವ ಇವರಿಂದ ಸಾಂದರ್ಭಿಕವಾಗಿ ಹೊರಹೊಮ್ಮಿದ ಹನಿಗವನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡು ಗಮನ ಸೆಳೆದಿವೆ.
ಕನ್ನಡದಲ್ಲಿ ಹನಿಗನ ಅಥವಾ ಚುಟುಕುಗಳನ್ನು ಹೆಚ್ಚು ಜನಪ್ರಿಯಗೊಳಿಸಿದ ಎಚ್.ಡುಂಡಿರಾಜ್ ಅವರ ಕುರಿತಾಗಿಯೂ ಸಂಕಲನದಲ್ಲಿ ಒಂದು ಹನಿಗವನ ಆಕರ್ಷವಾಗಿ ಮೂಡಿಬಂದಿದೆ. ಕವಿಗೆ ಕಾಡಿರುವ ಹಲವಾರು ಸಂಗತಿಗಳು ಇಲ್ಲಿ ಇಬ್ಬನಿಯ ಹನಿಯಂತೆ, ಸ್ವಾತಿ ಮುತ್ತಿನಂತೆ ಮೈದೆಳೆದಿವೆ.
ವೃತ್ತಿಯಲ್ಲಿ ಮಕ್ಕಳ ನೆಚ್ಚಿನ ಶಿಕ್ಷಕರು ಹಾಗೂ ಯುವಕವಿ ಮೈಲಾರಪ್ಪ ಬೂದಿಹಾಳ ಅವರು ಜನಿಸಿದ್ದು ಗದಗ ಜಿಲ್ಲೆಯ ಹೊಸೂರು ಗ್ರಾಮದಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಹಾಗೂ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಪ್ರಸ್ತುತ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಳೇ ಜೀರಾಳ ಕಲ್ಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಪದ ಕಲಾವಿದರೂ ಆಗಿರುವ ಮೈಲಾರಪ್ಪನವರೂ ಕನಕಗಿರಿ ಉತ್ಸವ, ಆನೆಗೊಂದಿ ಉತ್ಸವ, ಹಂಪಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದರಾಗಿ ಭಾಗವಹಿಸಿದ್ದಾರೆ. ...
READ MORE