ಸುರೇಶ ರಾಜಮಾನೆ ಅವರ ಈ ಸಂಕಲನದಲ್ಲಿ ಹೆಣ್ಣಿನ ಬಗೆಗಿನ ಕಳಕಳಿ, ಅಬಲೆ-ಸಬಲೆಯ, ಲೈಂಗಿಕ ಕಾರ್‍ಯಕರ್ತರಾಗಿ ದುಡಿಯುತ್ತಿರುವ, ಕಾಮುಕರ ವಿಕಟ ಅಟ್ಟಹಾಸಕ್ಕೆ ಸಿಕ್ಕಿ ನಲುಗಿದ, ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳ ಆಂತರ್ಯದ ನೋವಗಳ ಕುರಿತು ಮಾತನಾಡುತ್ತವೆ.
ಕನ್ನಡ ನಾಡು-ನುಡಿ, ಸಮಕಾಲಿನ ತಲ್ಲಣಗಳ ಬಗ್ಗೆ ಅವರ ಅಪಾರ ಕಾಳಜಿ, ಜಾಗತೀಕರಣದ ನವೀಕರಣದಲ್ಲಿ ದಲಿತರ ಅಸ್ಪೃಷ್ಯರ ದಮನಿಯ ದನಿಗಳು ಕವಿಯ ಕಾವ್ಯದಲ್ಲಿ ಹಾಸುಹೊಕ್ಕಾಗಿವೆ.
ಕದ್ದು ನೋಡುವ ಕಿರಾತಕರೆಡೆಗೆ ಸೆರಗ ಪರದೆಯ ಹಾಕಿ, ಸಾಕಿ ಬೆಳೆಸಿದ ಹುಡುಗಿ, ಸಮಯದ ಕೈಗೊಂಬೆಯಾಗಿ ಆ ಖಾಕಿಯವನಲ್ಲಿ ಪಡೆದ ಸಾಲದ ಬಾಕಿಗೆ ಶೋಕಿಯಾದಳು ಬದುಕಿ ಬಾಳುವ ಬಯಕೆಗಳ ಕೈಚೆಲ್ಲಿ, ಕಿತ್ತು ತಿನ್ನುವ ಬಿಳಿಯರ ಆಳಾಗಿ ಹಾಳಾದಳು-ಅವಳ ಬಾಳನ್ಯಾರು ಬಲ್ಲರೇ ವಿಧಿಯೆ? ‘ಮೌನ ಯುದ್ಧ’ದ ‘ಸಮಯದೊಂದಿಗೆ ಹಾದರ’ ಕವಿತೆಯ ಸಾಲುಗಳಿವು.
ಸುರೇಶ ಎಲ್. ರಾಜಮಾನೆ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನವರು. ಸದ್ಯ ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಸುರೇಶ್ ಅವರು 'ಸುಡುವ ಬೆಂಕಿಯ ನಗು' ಮತ್ತು 'ಮೌನ ಯುದ್ಧ' ಎಂಬ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ...
READ MORE