ಪ್ರೇಮ ಕವಿತೆಗಳಂತೆ ಕಾಣುವ ಪ್ರೇಮ ವಿಕಾರದ ವಿರುದ್ಧದ ಕವಿತೆಗಳ ಸಂಕಲನ ’ಮೌನ ಗಲ್ಲಿಗೇರಿತು’. ಈ ಸಂಕಲನದ ಕವಿತೆಗಳಲ್ಲಿ ವರದಕ್ಷಿಣೆ, ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯದ ವಿರುದ್ಧ, ಆಧುನಿಕತೆಯ ತಾಕುವಂತಹ ಕವಿತೆಗಳು ಇದರಲ್ಲಿವೆ. ಮುನ್ನುಡಿಯಲ್ಲಿ ಬರೆಯುತ್ತಾ ಹುಲಿಕುಂಟೆ ಮೂರ್ತಿ ಅವರು ರಂಗಸ್ವಾಮಿ ಅವರ ಕವಿತೆಗಳು ಕಾವ್ಯ ಆನಂದವನ್ನು ಕೊಡುವುದರ ಬದಲಿಗೆ ಯಾರಿಗೂ ಕೇಡು ಬಗೆಯದ, ಪ್ರಾಮಾಣಿಕವಾದ ಪ್ರೀತಿಯ ಭಾವಗಳು ಕಂಡು ಬರುತ್ತದೆ ಎಂದಿದ್ದಾರೆ. ಇದು ರಂಗಸ್ವಾಮಿ ಅವರ ಕವಿತೆಗಳ ಆಳ ಹಾಗೂ ಆಲೋಚನಾ ಕ್ರಮದ ಕುರಿತು ತಿಳಿಸುತ್ತದೆ. ಸಾಮಾಜಿಕ ಅಸಮಾನತೆಯ ವಿರುದ್ಧದ ಕಾವ್ಯ ಹೋರಾಟವಾಗಿ ಮೂಡಿಬಂದಿರುವ ಕವಿತೆಗಳ ಈ ಸಂಕಲನದ ಒಂದು ಚುಟುಕು ಓದಿಗಾಗಿ: ಜ್ವರ ಹಿಡಿದ ಗರ್ಭದೊಳಗೆ ಹೆಣಭಾರದ ಫೈಲುಗಳು ಕಮಟು ವಾಸನೆ; ಪುಟ ಪುಟಗಳಲ್ಲೂ ರಕ್ತದ ಬರಹಗಳು ಕಪ್ಪು ಹಿಕ್ಕೆಗಳು ಕೆಂಪು ಚುಕ್ಕೆಗಳು ಛೋಟಾ ಸಹಿಗಳು, ಹೆಬ್ಬೆಟ್ಟಿನ ಗುರುತುಗಳು ಶಬ್ದಗಳು, ಶಬ್ದಗಳು ಬರೀ ಶಬ್ದಗಳು ಮನುಷ್ಯರೆಲ್ಲಾ ಕ್ರಿಮಿಗಳಾಗಿರುವ ದಿನಗಳು ಮುಷ್ಟಿಗಾತ್ರದ ಹೃದಯಗಳು ಗೆದ್ದಲು ಕಟ್ಟಿದ ಮನಸ್ಸುಗಳು
ಬರಹಗಾರ ರಂಗಸ್ವಾಮಿ ಎಸ್. ಅವರು ಜನಿಸಿದ್ದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದಮಗಲಯ್ಯನಪಾಳ್ಯದಲ್ಲಿ. ತುಮಕೂರುನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಡ್ರಾಮಾ ಡಿಪ್ಲೊಮಾ ಶಿಕ್ಷಣವನ್ನು ಪಡೆದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ರಂಗಭೂಮಿ ಹಾಗೂ ಬೆಳ್ಳಿತೆರೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಗವತಿ ಕಾಡು ಹಾಗೂ ಮೌನ ಗಲ್ಲಿಗೇರಿತು ಇವರ ಪ್ರಮುಖ ಕೃತಿಗಳು. ...
READ MORE