ಮೊದಲ ಹನಿ

Author : ವೆಂಕಟೇಶ ಚಾಗಿ

Pages 80

₹ 75.00




Year of Publication: 2018
Published by: ಚೇತನ್‌ ಪ್ರಕಾಶನ
Address: ಪತ್ತಾರ ಓಣಿ, ಲಿಂಗಸುಗೂರು, ರಾಯಚೂರು ಜಿಲ್ಲೆ.
Phone: 9611311195

Synopsys

ಸಾಮಾಜಿಕ, ಕೌಟುಂಬಿಕ, ಪ್ರೀತಿ, ಸ್ನೇಹ, ದೇಶ ಹೀಗೆ ಹಲವಾರು ವಿಷಯಗಳ ಕುರಿತು ವಿವಿಧ ಸಮಯದಲ್ಲಿ ಬರೆದ ಹನಿಗವನಗಳ ಸಂಕಲಿತ ರೂಪ ಮೊದಲ ಹನಿ. ಈ ಕೃತಿಯಲ್ಲಿ ಕವಿ ವೆಂಕಟೇಶ ಚಾಗಿ ಅವರು ಬರೆದ 122 ಹನಿಗವನಗಳಿವೆ. ನಾನಾ ಆಯಾಮಗಳ ಮೂಲಕ ರಚಿಸಿದ ಈ ಹನಿಗವನಗಳು ಓದುಗರನ್ನು ಸೆಳೆಯುತ್ತವೆ. ಇಲ್ಲಿನ ಕವನಗಳ ಒಳಹೊಕ್ಕು ನೋಡಿದರೆ ಅವು ಚಿಂತನಾತ್ಮಕವಾಗಿಯೂ, ಸಾಮಾಜಿಕ ಕಳಕಳಿ ಉಳ್ಳವು, ಹಾಸ್ಯ ಚಟಾಕಿಯಿಂದ ಕೂಡಿವೆ. ಈ ಕೃತಿಯಲ್ಲಿನ ಒಂದೆರಡು ಹನಿಗವನಗಳು ಓದಿಗಾಗಿ:

ಹಿಂದೆ ಇದ್ದರು ಜನ
ಬಹಳ ಗಟ್ಟಿ ಮುಟ್ಟು
ಕಥೆ, ಕವನ, ಕಾದಂಬರಿಗಳೆಂದರೆ 
ಅವರಿಗೆ ಅಚ್ಚು ಮೆಚ್ಚು
ಓದುತ್ತಿದ್ದರು ಎಲ್ಲ ಬಿಡದೆ ಇಷ್ಟ ಪಟ್ಟು

ಆದರೆ, 
ಈಗಿನ ಜನ ತದ್ವಿರುದ್ಧ
ಕಥೆ, ಕವನ, ಕಾದಂಬರಿಗಳೆಂದರೆ ಬಲು ಬಿಕ್ಕಟ್ಟು
ಓದಲು ಇವರಿಗೆ ಬೇಕು
ಈಟೇ…. ಇಟು
ಚಿಟಿಕೆಯಲಿ ಮುಗಿಯುವಂತಿರಬೇಕು
ಚುಟುಕು.. ಚುಟುಕು ಚುಟುಕು. 

* * * * * * * 
’ಮೊದಲ ಮಳೆ ಹನಿ ಧರೆಗಿಳಿಯಲು
ಅದೆಂಥಾ ಉಲ್ಲಾಸ ಈ ಧರೆಗೆ.
’ಮೊದಲ ಹನಿ’ ಹನಿ ಗವನ ಮನಸ್ಸಿಗೆ ತಾಗಲು
ಅದೆಂಥಾ ಉನ್ಮಾದ ಈ ಭಾವ ಜೀವಕ್ಕೆ…’

About the Author

ವೆಂಕಟೇಶ ಚಾಗಿ
(01 June 1985)

ಕವಿ, ಶಿಕ್ಷಕ ವೆಂಕಟೇಶ ಚಾಗಿ ಅವರು ಮೂಲತಃ ಗದಗ ನಗರದವರು. (ಜನನ: 1985 ಜೂನ್‌ 6ರಂದು). ಎಂ.ಎಸ್.ಸಿ ಪದವೀಧರರು. ಪ್ರಸ್ತುತ ರಾಯಚೂರು ಜಿಲ್ಲೆಯ ಈಚನಾಳದಲ್ಲಿ ಪ್ರಥಮಿಕ ಶಾಲಾ  ಶಿಕ್ಷಕರು. ‘ಮೊದಲ ಹನಿ’ , ಬದುಕಿನ ಬಣ್ಣಗಳು. ಹಕ್ಕಿಯ ಅರಮನೆ (ಕವನ ಸಂಕಲನಗಳು) ಲಿಂಗಸುಗೂರ ಸಿರಿಗನ್ನಡ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ, ಲಿಂಗಸುಗೂರ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷ, ರಾಯಚೂರು ಜಿಲ್ಲಾ ಕವಿವೃಕ್ಷ ಬಳಗದ ಸಂಘಟನಾ ಕಾರ್ಯದರ್ಶಿ, ಲಿಂಗಸುಗೂರ ಕಾವ್ಯ ಮಂಟಪದ ಸದಸ್ಯರು. ಬೆಂಗಳೂರು ಜಿಲ್ಲಾ ಕವಿವೃಕ್ಷ ಬಳಗದಿಂದ ಕನ್ನಡ ಸಾಹಿತ್ಯ ಕೌಸ್ತುಭ ಪ್ರಶಸ್ತಿದೊರೆತಿದೆ.  ...

READ MORE

Related Books