ಬರಡಾಗಿರುವ ಬದುಕಿಗೆ ಚೇತನ ನೀಡಬಲ್ಲವು -ಮಿನುಗುವ ತಾರೆ’ ಸಂಕಲನದ ಕವಿತೆಗಳು. ಪ್ರೀತಿ, ಮಮತೆ ಬತ್ತಿ ಹೋದ ಕಾಲನ ತೆಕ್ಕೆಯಲ್ಲಿ ಕವಯಿತ್ರಿಯ ಮನದಲ್ಲಿ ಚಿತ್ರಿತವಾದ ಅಂಬೇಡ್ಕರ್, ಬಸವ, ಅಲ್ಲಮ, ಕನಕ ಎಲ್ಲರೂ ಕವಿತೆಗಳ ಮೂಲಕ ಓದುಗರನ್ನು ಹಾದು ಹೋಗುತ್ತಾರೆ. ಮರೆಯಾದ ಮಹಾನ್ ಚೇತನಗಳ ಮರು ಮನನ ನಮ್ಮೆದೆಯ ಅಂಗಳದಲ್ಲಿ ದೀಪದಂತೆ ನಿಂತು, ಬದುಕಿನ ರಸಗಳಿಗೆಯತ್ತಲೂ ಕೊಂಡೊಯ್ಯುತ್ತವೆ.
ಕವಯತ್ರಿ, ಕಥೆಗಾರ್ತಿ ತೇಜಾವತಿ ಹೆಚ್. ಡಿ. ಅವರು ವೃತ್ತಿಯಿಂದ ಕನ್ನಡ ಶಿಕ್ಷಕಿ. ಮೂಲತಃ ತುಮಕೂರಿನವರು. ಕಾವ್ಯ,ಕತೆ,ಲೇಖನ, ಕಾದಂಬರಿ ಮತ್ತು ಪ್ರಬಂಧ ಕ್ಷೇತ್ರ ಅವರ ಆಸಕ್ತಿಯ ಕ್ಷೇತ್ರಗಳು. ಕಾಲಚಕ್ರ - ಹೊನ್ನುಡಿ ಸಂಕಲನ ಹಾಗೂ ಮಿನುಗುವ ತಾರೆ - ಕವನ ಸಂಕಲನ ಪ್ರಕಟಣೆ ಕಂಡಿದೆ. ಅವರ ಹಲವಾರು ಬರಹಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಉತ್ತಮ ಶಿಕ್ಷಕ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಕರುನಾಡ ಚೇತನ ಪ್ರಶಸ್ತಿ’ದೊರೆತಿವೆ. ...
READ MORE