ವಿನೋದ್ ಕುಮಾರ್ ಆರ್ ವಿ ರವರ 2ನೇ ಪುಸ್ತಕ ಮಿನಿ ಹನಿ ಬುತ್ತಿ . ಈಗಾಗಲೇ ಬಣ್ಣದ ಲೋಕ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದೀಗ ಓದುಗರಿಗೆ ಮಿನಿ ಹನಿ ಬುತ್ತಿ ಕಟ್ಟಿ ಕೊಟ್ಟಿದ್ದಾರೆ. ದಣಿವಾದಾಗಲೆಲ್ಲಾ ಈ ಬುತ್ತಿ ಬಿಚ್ಚಿ ಊಟ ಮಾಡಬಹುದು. ಹನಿಗವನಗಳ ರಚನೆ ಸುಲಭ ಸಾಧ್ಯವಾದುದೇನಲ್ಲ ಶಬ್ದ ಜ್ಞಾನ,ಶಬ್ದ ಧ್ವನಿ, ಶಬ್ದ ಸಾಧ್ಯತೆ ಮುಂತಾದವುಗಳ ಶಬ್ದ ಪರಿಣಿತಿ ಅಗತ್ಯ. ಈ ಸಂಕಲನದಲ್ಲಿ ಲಘುಹಾಸ್ಯ ತುಳಕಿಸುವ ಅಥ೯ ಹೊಳೆಯಿಸುವ ಭೋಧಪ್ರದವಾದ ಹಲವು ನುಡಿ ಚಿತ್ತಾರಗಳಿವೆ.ಸದ್ಗುಣ,ಮೇಲು ಗೈ,ಜ್ಞಾನ, ಉಪಾಯ,ಸಿಹಿಕಹಿ,ವಿವಾದ,ಎಚ್ಚರ ಮುಂತಾದುವುಗಳು ಆಕಷ೯ಣೀಯವಾಗಿವೆ. ಟಿ ಎಸ್ ನಾಗರಾಜ್ ಶೆಟ್ಟಿ ತಿಪಟೂರು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತರು
ವೃತ್ತಿಯಲ್ಲಿ ಶಿಕ್ಷಕರಾಗಿರುವ ವಿನೋದ್ ಕುಮಾರ್ ಆರ್ ವಿ ಅವರು ಶಿಕ್ಷಕರು, ಚಿಕ್ಕಬಳ್ಳಾಪುರದವರಾದ ಇವರು ಸಣ್ಣಕಥೆ, ನ್ಯಾನೋಕಥೆ, ಕವನ, ಹನಿಗವನ, ಲೇಖನಗಳನ್ನು ಬರೆಯುವ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಿ: ಮಿನಿ ಹನಿ ಬುತ್ತಿ (ಹನಿಗವನ ಸಂಕಲನ) ...
READ MORE