ಮಿನಗು ದೀಪ

Author : ಪರಿಮಳಾ ರಾವ್ ಜಿ.ಆರ್

Pages 62

₹ 35.00




Year of Publication: 2000
Published by: ಅನಿಕಾ ಪ್ರಕಾಶನ
Address: ಗರ್ಗೇಶ್ವರಿ, #1003, 27ನೇ ’ಎ’ ಮೈನ್ ರೋಡ್, 9ನೇ ಬ್ಲಾಕ್, ಜಯನಗರ, ಬೆಂಗಳೂರು-69

Synopsys

`ಮಿನಗು ದೀಪ’ ಕೃತಿಯು ಜಿ. ಆರ್. ಪರಿಮಳಾರಾವ್ ಅವರ ಹನಿಗವನಗಳ ಸಂಕಲನ. ಈ ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಸಾಹಿತಿ ಪಿ.ಎಸ್. ರಾಮಾನುಜಂ ಅವರು, ಈ ಹನಿಗವನದಲ್ಲಿ ಅನೇಕ ಕವನಗಳು ಬಿಡಿ ಬಿಡಿಯಾಗಿ ಮುದವನ್ನು ಕೊಡುತ್ತವೆ. ಶಬ್ದ ಚಮತ್ಕಾರವು ಒಂದು ಕಡೆ ಮನಸ್ಸನ್ನು ಅರಳಿಸಿದರೆ ಮತ್ತೊಂದು ಕಡೆ ಕವನದ ಹಿಂದಿರುವ ಭಾವನೆಗಳು ಮನಸ್ಸನ್ನು ತಟ್ಟುತ್ತವೆ. ಎಲ್ಲೂ ನಿರಾಶ ಭಾವನೆಯಿಲ್ಲದ ಕವನಗಳು ಲವಲವಿಕೆಯಿಂದ ಸಾಗುತ್ತವೆ. ಈ ಕವನಗಳು ಪರಿಪಕ್ವವಾಗುವ ಮಾರ್ಗದಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ. ಈ ಕವಯತ್ರಿಯು ಇದೇ ಹಾದಿಯಲ್ಲಿ ನಡೆದು ಇನ್ನೂ ಉತ್ಕೃಷ್ಟವಾದ ಕವನಗಳನ್ನು ರಚಿಸುವುದರಲ್ಲಿ ಸಂಶಯವಿಲ್ಲ. ಇವರಲ್ಲಿ ಕಾವ್ಯೋತ್ಸಾಹವಿದೆ, ಭಾವಪ್ರಪಂಚದ ಒತ್ತಡವಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಪರಿಮಳಾ ರಾವ್ ಜಿ.ಆರ್
(06 January 1941)

ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ.  ...

READ MORE

Related Books