ಮಾಯಾಪೆಟ್ಟಿಗೆ

Author : ಜ್ಯೋತಿ ಗುರುಪ್ರಸಾದ್

Pages 152

₹ 90.00




Year of Publication: 2009
Published by: ಅಧ್ಯಯನ ಮಂಡಲ
Address: 13/85, ಆರ್‌ ವಿ ರಸ್ತೆ, ಬಸವನಗುಡಿ, ಬೆಂಗಳೂರು 04

Synopsys

’ಕಾಣದೇ ಇರುವುದನ್ನು ಕಾಣಿಸುವುದೇ ಜ್ಯೋತಿ ಅವರ ಪಾಲಿಗೆ ಕಾವ್ಯ. ಇಲ್ಲಿನ ಬಹುತೇಕ ಎಲ್ಲ ಕವನಗಳಲ್ಲೂ ಈ ಒಂದು ವಿಚಾರ ಪದೇ ಪದೇ ಪ್ರಸ್ತಾಪವಾಗುತ್ತದೆ. ಕಿಸಾಗೌತಮಿ ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ಹುಡುಕಿಕೊಂಡು ಹೋಗಿ ಸತ್ತ ತನ್ನ ಕಂದನನ್ನು ತನ್ನೊಳಗೇ ಮತ್ತೆ ಕಂಡುಕೊಳ್ಳುತ್ತಾಳೆ. ಇದೇ ಜ್ಯೋತಿಯವರ ಪಾಲಿಗೆ ಕಾವ್ಯ’ ಎಂದು ಕವಯತ್ರಿ ಜ್ಯೋತಿ ಗುರುಪ್ರಸಾದರ ಎರಡನೇ ಕವನ ಸಂಕಲನ ’ಮಾಯಾಪೆಟ್ಟಿಗೆ’ ಕುರಿತು ಪ್ರಸ್ತಾಪಿಸುತ್ತಾರೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು. ಆರ್‌. ಅನಂತಮೂರ್ತಿ. 

ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಪ್ರಶಸ್ತಿ , ಕನ್ನಡ ಸಾಹಿತ್ಯ ಪರಿಷತ್‌ನ ನೀಲಗಂಗಾ ದತ್ತಿ ಪ್ರಶಸ್ತಿ ಹಾಗು ನಿರತ ಸಾಹಿತ್ಯ ಪ್ರಶಸ್ತಿಗಳು ’ಮಾಯಾಪೆಟ್ಟಿಗೆ’ ಕೃತಿಗೆ ಸಂದಿವೆ. 

About the Author

ಜ್ಯೋತಿ ಗುರುಪ್ರಸಾದ್
(16 July 1965)

ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್‌ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್‌ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ...

READ MORE

Awards & Recognitions

Related Books