'ಮಾಯಾ ಪಾತಾಳ’ ರಾಮಲಿಂಗಪ್ಪ ಟಿ. ಬೇಗೂರು ಅವರ ಕವನಸಂಗ್ರಹವಾಗಿದೆ. ಕಾವ್ಯಗಳಲ್ಲಿ ನಮಗೆ ದಕ್ಕುವುದು ಬಹಳ ಎಚ್ಚರದ ಕಟುಸತ್ಯದ ಮಾತುಗಳೊಳಗಿರುವ ವಿವೇಕದ ದನಿ ಮಾತ್ರ . ಪದ-ಪ್ರಾಸಗಳಿಗಾಗಿ ತಡಕಾಡದೆ, ಭಾವನೆಗಳು ಜಾಗ ಬಿಟ್ಟು ಕದಲಲಾರದೆ ಕೂತಾಗ ಅರ್ಥವಂತಿಕೆ ಮೆರೆಸಿದ ಕವನಗಳಾಗಿವೆ.
ವಿಮರ್ಶಕ-ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರು ಮೂಲತಃ ನೆಲಮಂಗಲ ತಾಲ್ಲೂಕಿನ ತೆಪ್ಪದ ಬೇಗೂರು ಗ್ರಾಮದವರು. 1968ರ ಡಿಸೆಂಬರ್ 29ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಆರು ಚಿನ್ನದ ಪದಕಗಳೊಂದಿಗೆ ಪ್ರಥಮ ರಾಂಕ್‌ನಲ್ಲಿ ಕನ್ನಡ ಎಂ.ಎ. ಪದವಿ. ಬೆಂಗಳೂರು, ಚಳ್ಳಕೆರೆ, ಕುಕನೂರು, ಕೋಲಾರ, ಚಿಂತಾಮಣಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಕೆಂಗೇರಿ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಕಾವ್ಯ, ವಿಚಾರಸಾಹಿತ್ಯ, ಸಂಶೋಧನೆ, ವಿಮರ್ಶೆಗಳಲ್ಲಿ ಪರಿಶ್ರಮ ಇರುವ ಇವರಿಗೆ ಜಿ.ಎಸ್.ಎಸ್. ಕಾವ್ಯಪ್ರಶಸ್ತಿ ಲಭಿಸಿದೆ. ’ಮಾಯಾಪಾತಾಳ’,’ಸಂಕರಬಂಡಿ’, ಮಾರ್ಗಾಂತರ, ಪರಕಾಯ, ಎಡ್ವರ್ಡ್ ಸೈದ್, ಅಲ್ಲಮಪ್ರಭು : ಆಧುನಿಕ ಪೂರ್ವ ಅನುಸಂಧಾನಗಳು ಮೊದಲಾದವು ಪ್ರಕಟಿತ ...
READ MOREಹೊಸತು ಜುಲೈ- 2002
ವ್ಯಕ್ತಿಗತ ಅನುಭವಗಳನ್ನೊಂದಿಷ್ಟು ಮಥಿಸಿದಾಗ ಸಿಕ್ಕ ಹಾಲಾಹಲ ವನ್ನು ತಾನುಂಡು ಅಮೃತವನ್ನು ನಮಗೂ ಒಂದಿಷ್ಟು ಉಣ್ಣಲೆಂದು ಕೊಟ್ಟಿರುವ ಕವಿ ಶ್ರೀ ರಾಮಲಿಂಗಪ್ಪ ಟಿ.ಬೇಗೂರರು, ಅವರ ಕಾವ್ಯಗಳಲ್ಲಿ ನಮಗೆ ದಕ್ಕುವುದು ಬಹಳ ಎಚ್ಚರದ ಕಟುಸತ್ಯದ ಮಾತುಗಳೊಳಗಿರುವ ವಿವೇಕದ ದನಿ ಮಾತ್ರ ! ಪದ-ಪ್ರಾಸಗಳಿ ಗಾಗಿ ತಡಕಾಡದೆ, ಭಾವನೆಗಳು ಜಾಗ ಬಿಟ್ಟು ಕದಲಲಾರದೆ ಕೂತಾಗ ಅರ್ಥವಂತಿಕೆ ಯನ್ನೇ ಮೆರೆಸಿದ ಕವನಗಳಿವು.