`ಮಾರಿ’ ಕೃತಿಯು ಡಿ.ಸಿ. ರಾಜಪ್ಪ ಅವರ ಕವನ ಸಂಕಲನವಾಗಿದೆ. 2004ರಲ್ಲಿ ಈ ಕೃತಿಯು ಎರಡನೇ ಮುದ್ರಣವನ್ನು ಪಡೆದುಕೊಂಡಿರುತ್ತದೆ. ಈ ಕೃತಿಯಲ್ಲಿರುವ ಕೆಲವೊಂದು ವಿಚಾರಗಳು ಹೀಗಿವೆ: ಸಂಸ್ಕೃತಿ, ಸಾಹಿತ್ಯ, ಭಾಷೆ, ಕಲೆಗಳು ಯಾವುದೇ ವರ್ಗ, ಧರ್ಮ, ಜನಾಂಗ ಬಂಧನಗಳನ್ನು ಕಳಚಿ ಬೆಳೆಯುತ್ತ ಸಾಗುತ್ತವೆ. ಹಾಗೆ ಆದಾಗಲೇ ಅವುಗಳ ಸಾರ್ವಕಾಲಿಕತೆ ಮತ್ತು ಸಾರ್ವದೇಶಿ ಕಲೆಗಳ ಮಹತ್ವ ಹಾಗೂ ಪ್ರಯೋಜನ ಹೆಚ್ಚುತ್ತವೆ. ಆದ್ದರಿಂದ ಯಾವುದಾದರೂ ಒಂದು ಭಾಷೆಯಲ್ಲಿ ರಚಿತವಾಗುತ್ತಿರುವ ಸಾಹಿತ್ಯ ಕ್ಷೇತ್ರದಲ್ಲಿಯೂ ಇಂಥ ಅಲೆಗಳು, ಗಾಳಿಗಳು ಬೀಸಿದಾಗ ಅದು ಸಾಹಿತ್ಯ ಪ್ರಿಯರಿಗೆ ಇಷ್ಟವಾಗುವ ಸಂಗತಿಯಾಗುತ್ತದೆ. ಬಹು ಸಂಖ್ಯೆಯಲ್ಲಿ ಅಧ್ಯಾಪಕರು ಬರೆಯುತ್ತಿರುವಾಗ ಬದುಕಿನ ಅನ್ಯ ಕ್ಷೇತ್ರಗಳ ಮಿತ್ರರೂ ಬರೆಯತೊಡಗಿದರೆ, ವಿವಿಧ ಅನುಭವಗಳ ವಯಸ್ಸುಗಳ ಧಣಿಗಳು ತಮ್ಮನ್ನು ಅಭಿವ್ಯಕ್ತಿಸತೊಡಗಿದರೆ ಅದು ನಮ್ಮ ಭಾಷೆಯ ಮೂಲ ಸಂಪತ್ತಿಗೆ ಹೆಗ್ಗಳಿಕೆಯಾಗುತ್ತದೆ, ಹೆಚ್ಚಳಿಕೆಯಾಗುತ್ತದೆ ಎಂದು ಇಲ್ಲಿ ವಿಶ್ಲೇಷಿತವಾಗುತ್ತದೆ.