ಕವಿ, ಲೇಖಕರಾದ ಗಣಪತಿ ಹೆಗಡೆ ಅವರ ಕವನ ಸಂಕಲನದ ಕವಿತೆಗಳು ಮೇಲ್ನೋಟಕ್ಕೆ ಸರಳವಾಗಿ ಕಂಡರೂ , ನಿತ್ಯಜೀವನದ ಆಗುಹೋಗುಗಳ ವಾಸ್ತವಾಂಶವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.
ಬದುಕು, ಸಮಾಜ, ಹೆಣ್ಣು ಮತ್ತು ಅಂತರಂಗದ ಅಭಿಲಾಷೆಯನ್ನು ತನ್ನದೇ ಆದ ಧಾಟಿಯಲ್ಲಿ ಕವಿತೆಯ ಜಾಡು ಹಿಡಿಯಲು ಯತ್ನಿಸಿ ಯಶಸ್ವಿಯೂ ಆಗಿದ್ದಾರೆ. ಸಮಾಜದಲ್ಲಿ ನಡೆಯುವ ಅನಿಷ್ಟತೆಗಳ ಬಗೆಗೆ ಕವಿಗೆ ವಿಷಾದವಿರುವ ಕವಿತೆಗಳನ್ನೂ ಇಲ್ಲಿ ಕಾಣಬಹುದು.
ಈ ಕವನ ಸಂಕಲನದಲ್ಲಿನ ಬಹುತೇಕ ಕವಿತೆಗಳು ಭಾವುಕ ನೆಲೆಯೊಳಗೆ ಮೂಡಿಬಂದರೂ , ಅದೆಲ್ಲವೂ ಕವಿಯ ಅನುಭವದ ,ಮೂಸೆಯಲ್ಲಿ ಹೊರಳಿದ ಕವಿತೆಗಳಾಗಿವೆ.