ಕವಿ ಜಗದೀಶ ಚಲವಾದಿ ಅವರ ಕವನ ಸಂಕಲನ ಮೌನಕ್ರಾಂತಿ. ಪ್ರಕಾಶ ಗ ಖಾಡೆ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕವಿ ಗೆಳೆಯ ಚಲವಾದಿ ಅವರು ಬರೆದ ತಾಯಿ, ಪ್ರೇಮ ಪರಿ, ಪ್ರೀತಿ ಸಾಗರ ಅಕ್ಷಯ ಪಾತ್ರೆ, ಬದಲಾವಣೆ, ಕಣ್ಣನೋಟ, ಪ್ರಕೃತಿಯ ಮುನಿಸು, ಮಾಯಾಜಾಲ ಈ ಮೊದಲಾದ ಕವಿತೆಗಳೆಲ್ಲ ಸೊಗಸಾಗಿ ರಚಿಸಿದ್ದಾರೆ. ಭಾವಜೀವಿಯಾದ ಕವಿ ಜಗದೀಶ ಚಲವಾದಿ ಅವರು ಒಟ್ಟಾರೆ ಮೊದಲ ಪ್ರಯತ್ನದಲ್ಲಿಯೇ ತನ್ನ ಅರಿವಿಗೆ ದಕ್ಕಿದ ವಸ್ತು ಸಂಗ್ರಹಗಳನ್ನಿಟ್ಟುಕೊಂಡು ಕಾವ್ಯ ಕಟ್ಟಿದ ಕವಿ ಎಂಬುದಾಗಿ ಬರೆದಿದ್ದಾರೆ.
ಸೀತಾತನುಜ ಎಂಬ ಕಾವ್ಯನಾಮದ ಜಗದೀಶ ಚಲವಾದಿ ಅವರು ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿಯವರು. ಸದ್ಯ ಚಡಚಣ ತಾಲ್ಲೂಕಿನ ಎಚ್ ಪಿ ಎಸ್ ಚಡಚಣ (ಮರಡಿ) ದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿ: 'ಮೌನಕ್ರಾಂತಿ' ಕವನ ಸಂಕಲನ ...
READ MORE