‘ಮಂಕು ಮಡಿಯನ ಕೊಂಕು ನುಡಿಗಳು’ ವೀರಭದ್ರ ಅವರ ಕವನ ಸಂಕಲನ. ಸ್ವತಂತ್ರ ಕಥೆಗಳಿಂದ ಮತ್ತು ಭಾಷಾಂತರ ಕೃತಿಗಳಿಂದ ಹೆಸರು ಮಾಡಿರುವ ಲೇಖಕರು ತಮ್ಮ ಸೃಜನಾತ್ಮಕ ಪ್ರತಿಭೆಯ ಇನ್ನೊಂದು ಮುಖವನ್ನು ಈ ಕವನಗಳ ಮೂಲಕ ಪ್ರಕಟಪಡಿಸಿದ್ದಾರೆ. ಅಂತರಂಗದ ಆಳದಲ್ಲಿ ಸಾಧಕ ಚೇತನವಾಗಿಯೂ ಮಿಡಿಯಬಲ್ಲರೆಂಬುದನ್ನು ನುಡಿದು ತೋರುತ್ತವೆ ಇಲ್ಲಿಯ ಕವನಗಳು.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿಯವರಾದ ವೀರಭದ್ರ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ವಸ್ತು ಮತ್ತು ಭಾಷೆಯಲ್ಲಿ ಹೊಸತನ ತಂದ ವೀರಭದ್ರ ಅವರು ತೆಲುಗು ಮತ್ತು ಇತರ ಭಾಷೆಯ ಕೃತಿಗಳನ್ನೂ ಕನ್ನಡೀಕರಿಸಿದ್ದಾರೆ. ನೀಲಿ ನೀರಿನ ಮೇಲೆ, ಈ ಭೂಮಿ ಈ ಆಕಾಶ, ಮರೆಯವರು, ಬಾವಿಯಿಂದ ಬೇಲಿಗೆ, ಕನ್ನಡಿ ನೋಡಿದ ನಾಯಿ (ಕಥಾ ಸಂಕಲನಗಳು), ಅನಾಥ ಪಕ್ಷಿಯ ಕಲರವ (ಸಮಗ್ರ ಕಥೆಗಳು), ದಶಕದ ಕಥೆಗಳು (ಸಂಪಾದಿತ ಸಂಕಲನ), ಸುತ್ತೂರ ಸುರಧೇನು (ಕಾದಂಬರಿ), ನನ್ನೆಲೆ ಕಥೆ ಬರೆಯೋಲ್ಲವೆ, ಮರಳಿನ ದಿನ್ನೆಗಳು (ಅನುವಾದಿತ ಕಥೆಗಳು), ಚರಿತ್ರಹೀನ, ದೇವದಾಸ, ನಾನು ಮಾಧವಿ, ಮನೆ ಸುಟ್ಟಿತು, ರಾಮನ ಬುದ್ಧಿವಂತಿಕೆ, ಕತ್ತಲಲ್ಲಿ ...
READ MORE