ಲೇಖಕ-ಕವಿ ಜೀವರಾಜ ಹ ಛತ್ರದ ಅವರ ಕವನ ಸಂಕಲನ-’ಮುಂಜೂರ್ಕಿ’. ಭಾವನೆಗಳ ಲಹರಿಯ ಸ್ವರೂಪ ತಿಳಿಸುವಂತೆ ಕವನಗಳಿವೆ. ಭಾವನಾ ಪ್ರಪಂಚದ ಅನಭಿಷಿಕ್ತ ದೊರೆಯಾದ ಕವಿಯ ಭಾವನೆಗಳು ಅತೀ ಮಹತ್ತವಾಗಿರುತ್ತದೆ. ಮನಸ್ಸಿನಲ್ಲಿಯೆ ಮಂಡಿಗೆ ತಿನ್ನುವವನ ಎದೆಯೊಳಗೆ ಭಾವನೆಗಳು ಇರುತ್ತವೆ. ಹಾಗೆಯೇ ಆತನ ಎದೆಯೊಳಗೆ ನೀಲ ನಕಾಶೆ ತಯಾರಾಗಿರುತ್ತದೆ. ಅತಂಹ ಭಾವನೆಗಳು ಸಾಹಿತ್ಯದ ಮೂಲಕ ಜನ್ಮ ತಾಳುತ್ತದೆ. ಭಾವನೆಯೊಳಗೆ ಕೂಡುವುದು, ಅಗಲುವುದು, ರಾಜನಾಗುವುದು, ಭಿಕ್ಷುಕನಾಗುವುದು, ಪತಿವ್ರತೆಯಾಗುವುದು ಸೂಳೆಯಾಗುವುದು, ಪ್ರಕೃತಿ, ನಭೋಮಂಡಲ, ನೀರಿನ ತಳಭಾಗ ಹೀಗೆ ಹಲವಾರು ವಿಚಾರಗಳನ್ನು ಇಲ್ಲಿ ಎಳೆಎಳೆಯಾಗಿ ಕಟ್ಟಿಕೊಡುವ ಮೂಲಕ ಭಾವಗಳ ಸ್ವರೂಪ ತಿಳಿಸುವ ಪ್ರಯತ್ನದಂತೆ ಕವನಗಳಿವೆ.
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...
READ MORE