ಹಿರಿಯ ಕವಿ ಪು.ತಿ. ನರಸಿಂಹಾಚಾರ್ ಅವರು ದೇಗುಲಗಳು ಈ ಪರಿಕ್ಲಪನೆಯ ಮೇಲೆ ಬರೆದ ಸುಮಾರು 52 ಕವಿತೆಗಳು ಇಲ್ಲಿ ಸಂಕಲನಗೊಂಡಿವೆ. ಈ ಎಲ್ಲ ಪದ್ಯಗಳಲ್ಲಿ ಒಂದೇ ಚಿಂತನೆ ಹರಿದಿದೆ; ಅದು ದೇಗುಲ ಎಂಬುದು. ಇದೇ ಸ್ಥಾಯಿ ಭಾವ. ಮನುಷ್ಯನ ನೆಲೆಯಲ್ಲಿ ಏರಿಳಿತಗಳು ಸಹಜ. ಅವುಗಳ ನಿಯಂತ್ರಣಕ್ಕೆ ಅಥವಾ ಸ್ಥಿರೀಕರಣಕ್ಕೆ ಒಂದು ಉಪಾಯವೆಂದರೆ-ಅವು ದೇಗುಲಗಳು. ಕವಿಯು ಹೇಳಿರುವಂತೆ ಇಲ್ಲಿಯ ಎಲ್ಲ ಕವನಗಳಿಗೂ ಒಂದೇ ಶೀರ್ಷಿಕೆ; ಮಲೆ ದೇಗುಲ. ಏಕೆಂದರೆ ಭಾವ ಒಂದೇ ಇರುವ ಹಲವು ಕವಿತೆಗಳು ಇಲ್ಲಿವೆ.
ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...
READ MORE