ಮಹಾತಾಯಿ

Author : ಎಚ್. ಲಿಂಗಪ್ಪ

Pages 100

₹ 80.00




Published by: ರಶ್ಮಿ ಪ್ರಕಾಶನ ಚಿತ್ರದುರ್ಗ
Phone: 99459 98099

Synopsys

ಈ ಕೃತಿಯು ದಲಿತ - ಪ್ರಜ್ಞೆಯ ಒಡಲಿಂದ ಹೊಮ್ಮಿದ ಕಿರಣಗಳು. ಮಹಾತಾಯಿ ಎನ್ನುವುದು ಒಂದು ದೀರ್ಘಕವಿತೆಗಳಿಗಷ್ಟೇ ಸೀಮಿತವಾಗಬೇಕಾಗಿಲ್ಲ. ಅವರು ಕಟ್ಟಿಕೊಟ್ಟಿರುವ ಎಲ್ಲ ಪಾತ್ರಗಳೂ ತಾಯ್ತನವನ್ನು ಹೊಂದಿದವುಗಳೇ. ನಿರ್ಲಕ್ಷಿತ ಸಮಾಜವನ್ನು ತನ್ನ ಮಡಿಲಲ್ಲಿ ತೆಗೆದುಕೊಂಡ ತಾಯಿ ಮನಸ್ಸುಗಳೇ ಆಗಿವೆ. ಆದುದರಿಂದ 'ಮಹಾತಾಯಿ' ಹೆಸರು ಇಲ್ಲಿರುವ ಎಲ್ಲ ದೀರ್ಘ ಕವಿತೆಗಳನ್ನು ಒಟ್ಟಾಗಿ ಕಟ್ಟಿಕೊಡುತ್ತದೆ. ಈ ವಿಶಿಷ್ಟ ಪ್ರಯೋಗದ ಕುರಿತಂತೆ ಲೇಖಕರು ಈ ರೀತಿ ಹೇಳಿಕೊಳ್ಳುತ್ತಾರೆ.ಇದು ಪದ್ಯ, ಗದ್ಯ, ರಗಳೆ, ಚಂಪೂ, ಛಂದಸ್ಸು ಎಲ್ಲವನ್ನೂ ಮೀರಿ ನನ್ನ ಬಾಲ್ಯದಿಂದ ಹಿಡಿದು ಇವತ್ತಿನವರೆಗೆ, ಹಿತಾನುಭವವನ್ನು ನೀಡುವಂತಹ ವಸ್ತುಗಳು.” ಇಲ್ಲಿ ಒಟ್ಟು ಎಂಟು ಜೀವನ ಕಥನಗಳಿವೆ. ಎಲ್ಲವೂ ತಳಸ್ತರದ ಜನರ ಬಿಡುಗಡೆಯ ಕನಸು ಕಂಡ ವ್ಯಕ್ತಿತ್ವಗಳು. ಮೊದಲನೆಯದು 'ಸಿದ್ದಾರ್ಥ ಬುದ್ದನಾದ' ಕವಿತೆ, ಇದು ವರ್ತಮಾನದ ಜೊತೆಗೆ ಸಂವಾದಿಯಾಗಬಲ್ಲ ಚಾರಿತ್ರಿಕ ಕಥನ. ಈ ಕಥನ ಮುಂದೆ ಪರಿಚಯಿಸಲ್ಪಡುವ ವ್ಯಕ್ತಿತ್ವಗಳ ಜೊತೆಗೆ ಒಂದಲ್ಲ ಒಂದು ಕಾರಣಕ್ಕಾಗಿ ಬೆಸೆದುಕೊಳ್ಳುತ್ತದೆ. ವೈಶಾಖ ಶುಕ್ಲ ಪೂರ್ಣಿಮೆಯಂದು ಬುದ್ದ ಸಿದ್ದಾರ್ಥ ಹುಟ್ಟಿದ ದಿನದಿಂದ ಅವನು ಬುದ್ಧನಾಗಿ ಲೋಕದಿಂದ ವಿದಾಯಹೇಳುವವರೆಗಿನ ಕಥನವನ್ನು ಕಾವ್ಯದ ಮೂಲಕ ತೆರೆದಿಟ್ಟಿದ್ದಾರೆ. ಎರಡನೆಯದು, ಪ್ರೊ. ಬಿ. ಕೃಷ್ಣಪ್ಪ - ಅವರ ಬದುಕು, ಹೋರಾಟಕ್ಕೆ ಸಂಬಂಧಿಸಿದ್ದು. ಅಸ್ಪಶ್ಯತೆಯ ವಿರುದ್ಧ ಹೋರಾಡಿದ ಕೃಷ್ಣಪ್ಪ ಅವರೊಳಗಿನ ಬುದ್ಧ ಚಿಂತನೆಯ ಅಂಶವನ್ನು ಆ ಕವಿತೆ ತೆರದಿಡುತ್ತದೆ. ಮೂರನೆಯದು, ಮಹಾತಾಯಿ. ಈಕೆ ಲೇಖಕರ ತಾಯಿಯೂ ಹೌದು. ತಳಸ್ತರದ ಶೋಷಿತರೆಲ್ಲರ ತಾಯಿಯೂ ಹೌದು. ಅವರು ಕಟ್ಟಿಕೊಡುವ ವ್ಯಕ್ತಿತ್ವ ಕಣಕಣಗಳಾಗಿ ಎಲ್ಲ ತಾಯಂದಿರಲ್ಲೂ ಹಂಚಿಹೋಗಿದೆ. ಭಾವುಕತೆಯೊಂದಿಗೆ ತೀರಾ ಕೊಚ್ಚಿ ಹೋಗದೆ  ಲೇಖಕರು ತನ್ನ ತಾಯಿಯನ್ನು ಗೌತಮಿ, ಮೀರಾಬಾಯಿಗೆ ಹೋಲಿಸುತ್ತಾ ಅವರನ್ನು ಸಾರ್ವತ್ರಿಕಗೊಳಿಸುತ್ತಾರೆ.

Related Books