‘ಮಹಾಮೌನ’ ಲಿಂಗಣ್ಣ ಗೋನಾಲ ಅವರ ಕವನಸಂಕಲನವಾಗಿದೆ. ಚಾರಿತ್ರಿಕ ವ್ಯಕ್ತಿ ಗೌತಮ ಬುದ್ಧನನ್ನು ಈಗಿರುವ ಪ್ರಚಲಿತ ಕಥೆಗಳ ಆಧಾರದಲ್ಲಿ ಈ ಶತಮಾನದ ಕವಿಗಳು ವಿವಿಧ ರೀತಿಯಲ್ಲಿ ಅರ್ಥೈಸಿದ್ದಾರೆ. ಚರಿತ್ರೆಯ ಸುದೀರ್ಘ ಕಾಲದಲ್ಲಿ ಧಾರ್ಮಿಕ ಚಳುವಳಿ ನಡೆದು ಬೌದ್ಧ ಧರ್ಮವನ್ನು ಹಿಮ್ಮೆಟ್ಟಿಸಲಾಗಿದೆ. ಪ್ರಬಲರಾಗುತ್ತಿದ್ದ ವೈದಿಕರಿಂದ ಬೌದ್ಧ ಧರ್ಮ ಹೆಚ್ಚು ಕಡಿಮೆ ಭಾರತದಿಂದಲೇ ಗಡೀಪಾರಾಗಿದೆ. ಬುದ್ಧನ ಬೆಳಕು ಅವನು ಹುಟ್ಟಿದ ನಾಡಿಗೆ ದಕ್ಕಿಲ್ಲ. ಇವೆಲ್ಲವನ್ನು ವಸ್ತುವನ್ನಾಗಿಸಿಕೊಂಡು ಇಲ್ಲಿನ ಕವನಗಳು ವಿಚಾರಪೂರ್ಣ ಧ್ವನಿಯೆತ್ತಿವೆ.