ಮಗು ಮಲಗಿದೆ ಎದೆಯ ಮೇಲೆ

Author : ಒಕ್ಕುಂದ ಎಂ.ಡಿ.

Pages 35

₹ 76.00




Year of Publication: 2003
Published by: ಲೋಹಿಯಾ ಪ್ರಕಾಶನ
Address: ಕಪ್ಪುಗಲ್ಲು ರಸ್ತೆ, ಬಳ್ಳಾರಿ

Synopsys

‘ಮಗು ಮಲಗಿದೆ ಎದೆಯ ಮೇಲೆ’  ಎಂ. ಡಿ. ಒಕ್ಕುಂದ ಅವರ ಕವನ ಸಂಕಲನವಾಗಿದೆ. ಕವಿಯ ಮನಸ್ಸು ಇಲ್ಲಿ ಎಷ್ಟು ನೊಂದಿದೆಯೆಂದರೆ ಅವರಿಗೆ ಜಾಗತಿಕ ನಕ್ಷೆಯಲ್ಲಿ ಗಡಿರೇಖೆಗಳು ರಕ್ತದ ಕಾಲುವೆಯಂತೆ ಕಂಡಿವೆ. ಒಂದು ಪದ್ಯದ ಸಾಲು ಇಲ್ಲಿದೆ ಧರ್ಮದ ವಿವರ ಕೇಳದ, ಯುದ್ಧದ ಪಾಠ ಹೇಳದ ಶಾಲೆ ತೆರೆಯಬೇಕು.

About the Author

ಒಕ್ಕುಂದ ಎಂ.ಡಿ.
(15 January 1967)

ಕವಿ- ಲೇಖಕ ಎಂ.ಡಿ.ಒಕ್ಕುಂದ ಅವರು ಕನ್ನಡ ಅಧ್ಯಾಪಕರಾಗಿದ್ದಾರೆ. ಅವರು ಧಾರವಾಡ ಜಿಲ್ಲೆ/ತಾಲೂಕಿನ ಅಮ್ಮಿನಭಾವಿಯಲ್ಲಿ 1967 ರ ಜೂನ್ 15 ರಂದು ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗ ಜಿಲ್ಲೆಯ ನರಗುಂದದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ರೆಕ್ಕೆ ಗರಿಗಳ ಬಿಚ್ಚಿ, ತುಳುಕು ಅವರ ಕವನ ಸಂಕಲನವಾಗಿದೆ.    ...

READ MORE

Reviews

ಹೊಸತು-2004- ಡಿಸೆಂಬರ್‌

ಯುದ್ಧಗಳಿಂದಾಗುವ ತಲ್ಲಣ ತಳಮಳ ಮತ್ತು ಅನಾಹುತ ಗಳನ್ನು ಅಕ್ಷರಗಳಲ್ಲಿ ಕಡೆದಿಡಲಾಗಿದೆ. ಇಂದು ಸಿಡಿಮದ್ದುಗಳ ಬಾಂಬುಗಳ ಆರ್ಭಟದಿಂದಾಗಿ ಮಳೆಯ ಮೋಡಗಳ ಗುಡುಗು ಸಿಡಿಲು ಕಿವಿಗೆ ಕೇಳಿಸದಂತಾಗಿದೆ. ಮಳೆಯಿಂದ ಇಳೆ ತೋಯ್ದುದಕ್ಕಿಂತ ಹೆಚ್ಚಾಗಿ ಮಾನವ ರಕ್ತದಿಂದ ನೆಲ ತೊಯ್ದಿದೆ. ಯಾಕೆ ಹೀಗೆ ? ಈ ಮಾನವನಿಗೇಕೆ ಸಹ ಮಾನವನ ರಕ್ತದ ದಾಹ ? ನಾವಿಂದು ಧರ್ಮವನ್ನೂ ಯುದ್ಧವನ್ನೂ ದೇಶಪ್ರೇಮದ ಸೋಗಿನಲ್ಲಿ ವೈಭವೀಕರಿಸುತ್ತ ಗಡಿಗಳನ್ನು ಹೆತ್ತ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿರು ವುದರಿಂದ ರಕ್ತದಲ್ಲೇ ಓಕುಳಿಯಾಡಿ ಕಣ್ಣೀರಿನಿಂದ ಅದನ್ನು ತೊಳೆಯುತ್ತಿದ್ದೇವೆ. ಕವಿಯ ಮನಸ್ಸು ಇಲ್ಲಿ ಎಷ್ಟು ನೊಂದಿದೆಯೆಂದರೆ ಅವರಿಗೆ ಜಾಗತಿಕ ನಕ್ಷೆಯಲ್ಲಿ ಗಡಿರೇಖೆಗಳು ರಕ್ತದ ಕಾಲುವೆಯಂತೆ ಕಂಡಿವೆ. ಒಂದು ಪದ್ಯದ ಸಾಲು ಇಲ್ಲಿದೆ :ಧರ್ಮದ ವಿವರ ಕೇಳದ, ಯುದ್ಧದ ಪಾಠ ಹೇಳದ ಶಾಲೆ ತೆರೆಯಬೇಕು.

Related Books