‘ಇಷ್ಟೂ ಕವಿತೆಗಳು ನನ್ನ ಹೃದಯವನ್ನು ಮುಟ್ಟಿ ರೂಪುಗೊಳಿಸಿವೆ. ಕವಿತೆ ಒಂದು ಕಲೆ ಎಂದೋ ಪ್ರತಿಭಾ ಪ್ರದರ್ಶನವೆಂದೋ ಭಾವಿಸಿರುವುದಕ್ಕಿಂತ ಅದು ನನ್ನನು ಹೊಕ್ಕು ಆಗಿಸುವ ಪ್ರಕ್ರಿಯೆಯೆಂದು ನಾನು ತಿಳಿದಿರುವುದು ಹೆಚ್ಚು. ಈ ಪ್ರತಿಯೊಂದು ಕವಿತೆಯೂ ಜೀವನದ ಅರಿವನ್ನು ಪಳಗಿಸಿದೆ, ಕಿಂಚಿತ್ ಹೆಚ್ಚಿಸಿದೆ. ಅದರ ಸಾರವೆಂದರೆ- ಬೆಟ್ಟದಷ್ಟೇ ಹುಲ್ಲು ಬೀಜಕ್ಕೂ ಅಸ್ತಿತ್ವದ ಅಧಿಕಾರವಿದೆ ಎಂಬುದು. ನಾನು ಈ ಪ್ರಪಂಚದ ಮಾನದಂಡವಲ್ಲ, ಅಲ್ಲದೆ ಎಲ್ಲವೂ- ನನ್ನ ವಿರುದ್ಧವಿರುವಂಥದೂ ಕೂಡ- ಈ ಪ್ರಪಂಚದ ಕೇಂದ್ರವೇ ಆಗಿದೆ ಎಂಬುದು. ಹಾಗಾಗಿ ಬೇರೆ ಬೇರೆಯದನ್ನು ಸಹಿಸುವುದು, ಅರ್ಥ ಮಾಡಿಕೊಳ್ಳುವುದು ಮತ್ತು ಪ್ರಿತಿಸುವಂತೆ ಹೃದಯವನ್ನು ಹದಗೊಳಿಸಿಕೊಳ್ಳುವುದು ಈ ಇಹದ ಪರಮ ನೀತಿಯೇ ಆಗಿದೆ ಎಂಬುದು. ಕಾವ್ಯದಂತೆ ಅಧ್ಯಾತ್ಮವೂ ಈ ಅರಿವನ್ನು ಕೊಡುತದೆ. ಆದರೆ ಅಧ್ಯಾತ್ಮ ಪ್ರತಿಯೊಂದರ ಅನನ್ಯ ಚಹರೆಯನ್ನು, ಇರುವನ್ನು ಸಮೀಕರಿಸಿಬಿಡುತ್ತದೆ. ಕವಿತೆ ಮಾತ್ರ ಎಲ್ಲದರ ವಿಶಿಷ್ಟ ಚಹರೆಯನ್ನು ತೊಡೆಯದೇ ಈ ಅರಿವನ್ನು ಹುಟ್ಟಿಸುತ್ತದೆ. ಕವಿತೆಯ ಬಗ್ಗೆ ನನಗಿರುವ ಒಲವು, ಸ್ಪಂದನಕ್ಕೆ ಕಾರಣವೇ ಅದು.’ -ಎಸ್. ಮಂಜುನಾಥ್
ಕಾವ್ಯ ಜೋಗಿ ಎಂದೆ ಹೆಸರುವಾಸಿಯಾದ ಎಸ್. ಮಂಜುನಾಥ್ ಅವರು 1960 ಜೋಗದಲ್ಲಿ ಜನಿಸಿದರು. ತಾಳಗುಪ್ಪ ಹಾಸನ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಎಂ.ಎ ಪದವೀಧರರು. ’ಹಕ್ಕಿ ಪಲ್ಟಿ', 'ಬಾಹು ಬಲಿ' 'ನಂದ ಬಟ್ಟಲು' 'ಮೌನದ ಮಣಿ' ಕಲ್ಲ ಪಾರಿವಾಳಗಳ ಬೇಟ' 'ಜೀವಯಾನ' ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಮುದ್ದಣ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿಗಳು ದೊರಕಿವೆ. ಇವರ ಮತ್ತೊಂದು ಕೃತಿ ‘ಸುಮ್ಮನಿರುವ ಸುಮಾನ’ ಎಂಬ ತಾವೋ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE