ಮಡಿಚಿಟ್ಟ ಕೌದಿ

Author : ಡಿ. ಬಿ. ರಜಿಯಾ

Pages 94

₹ 80.00




Year of Publication: 2004
Published by: ಸಿ.ವಿ.ಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003
Phone: 08023313400

Synopsys

ಡಿ.ಬಿ. ರಜಿಯಾ ಅವರ ಕವನ ಸಂಕಲನ ‘ಮಡಿಚಿಟ್ಟ ಕೌದಿ’ ಈ ಕೃತಿಗೆ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಡಿ.ಬಿ. ರಜಿಯಾ ಈಚಿನ ದಶಕಗಳಲ್ಲಿ ಭರವಸೆ ಹುಟ್ಟಿಸುವ ಕವಿತೆಗಳನ್ನು ಬರೆಯುತ್ತಿದ್ದಾರೆ. ಅವರ ಕವಿತೆಗಳು ಮುಸ್ಲಿಂ ಸಮುದಾಯದ ಸಂವೇದನೆಗಳನ್ನು ಪ್ರತಿಮಿಸುತ್ತಿವೆ. ಅದೇ ಹೊತ್ತಿಗೆ ಸಮಕಾಲೀನ ಸಾಮಾಜಿಕ ವಿನ್ಯಾಸದ ಒತ್ತಡಗಳೊಳಗೆ ಈ ಸಮುದಾಯವು ಬದುಕುವ ಹಾಗೂ ಬದುಕನ್ನು ರೂಪಿಸಿಕೊಳ್ಳುವ ಬಗೆಗಳನ್ನು ಕುರಿತು ಚಿಂತಿಸುತ್ತದೆ. ಭಾಷೆ, ಭಾವ, ವಸ್ತು ಲೋಕಗಳ ನಡುವೆ ಕವಿತೆಯನ್ನು ಕಟ್ಟುವ ಕ್ರಿಯಾಯೋಗದಲ್ಲಿ ಇವರು ಮುಳುಗಿರುವುದು ವಿಶೇಷ ಸಂಗತಿ.

About the Author

ಡಿ. ಬಿ. ರಜಿಯಾ
(26 January 1954)

ಡಿ. ಬಿ. ರಜಿಯಾ  ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ,  ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ...

READ MORE

Related Books