ಮಧುರ ಮೈತ್ರಿ

Author : ಎಸ್. ರಾಜು ಸೂಲೇನಹಳ್ಳಿ

Pages 82

₹ 100.00




Year of Publication: 2022
Published by: ಕರುಣಾಡ ಹಣತೆ ಪ್ರಕಾಶನ
Address: ಚಿತ್ರದುರ್

Synopsys

ಕಾದಂಬರಿಕಾರ ಎಸ್. ರಾಜುಕವಿ ಸೂಲೇನಹಳ್ಳಿ ಅವರ ಚೊಚ್ಚಲ ಸಂಪಾದಿತ ಕವನ ಸಂಕಲನ ಹೆಸರು 'ಮಧುರ ಮೈತ್ರಿ'. ಹಲವು ಕವಿಗಳು ಪ್ರತಿಭೆ ಮತ್ತು ಕಾವ್ಯದ ವಿಸ್ತರಣೆ ಅಕ್ಷರಗಳೊಡನೆ ತೋರಿಸಲು ಈ ಕೃತಿ ನೆರವಾಗಿದೆ. ಕನ್ನಡ ಸಾಹಿತ್ಯ ಹಿಂದಿನಿಂದಲೂ ಅಪಾರ ಕೊಡುಗೆ ನೀಡಿದಂತಹ ಕೀರ್ತಿ ನಮ್ಮ ನಾಡಿಗೆ ಇದೆ ಸುಮಾರು ೨೫೦೦ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿ ತುಂಬಾ ಹೆಮ್ಮೆಯ ವಿಷಯ ಎನ್ನಬಹುದು ಅಂತಹದರಲ್ಲಿ ಎಷ್ಟೋ ಕವಿಗಳು ತಮ್ಮ ಅನುಭವ ಹಾಗೂ ಸೃಜನಶೀಲತೆ ಬರವಣಿಗೆ ಮೂಲಕ ಸಮಾಜದ ಒಳಿತು ಮತ್ತು ಕೆಡಕು ತಿದ್ದಲು ಬರವಣಿಗೆ ಮುಖೇನ ಸಮಾಜದ ಬೆಳಕನ್ನು ಬೆಳಗುವ ಕಾರ್ಯ ಮಾಡಿದ್ದಾರೆ ಬಹುಶಃ ಇಂತಹ ಸಾಧಕರ ಬಗ್ಗೆ ಹೆಮ್ಮೆ ಎನಿಸುತ್ತದೆ. ಈ ಆಧುನಿಕ ಯುಗದಲ್ಲಿ ಕವಿಗಳು ನಾಡಿನ ಸಂಸ್ಕೃತಿ ಸಂರಕ್ಷಣೆ ಮಾಡುವ ಹೊಣೆ ಹೊತ್ತು ತಮಗೆ ನಿಲುಕದ ಅನುಭವದ ವಿಚಾರ ತಾವು ಕಂಡ ವಾಸ್ತವ ಸ್ಥಿತಿಯನ್ನು ಕಂಡು ಕವನಗಳನ್ನು ರಚಿಸುವ ಮೂಲಕ ಸಾಹಿತ್ಯದಲ್ಲಿ ನೆಲೆಗೊಳ್ಳುವ ತವಕದಲ್ಲಿದ್ದಾರೆ ಹಾಗೆಯೇ ಉತ್ತಮ ಕ್ಷೇತ್ರ ಆಯ್ದಕೊಂಡ ಎಲ್ಲಾ ಕವಿಗಳಿಗೆ ಹೃದಯ ಪೂರ್ವಕವಾಗಿ ಸ್ವಾಗತ ಕೋರುತ್ತೇವೆ. ಆನಂತರ ಒಟ್ಟು 54ಕವಿತೆಗಳು ಇಲ್ಲಿವೆ ಕೇವಲ ಕವನ ರಚನೆ ಮಾಡುವುದಲ್ಲದೇ ತಮ್ಮ ಕವನ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉತ್ಸಾಹ ಜೊತೆಗೆ ಎಲ್ಲರೂ ಓದಲಿ ಎನ್ನುವ ಮಹತ್ವದ ಉದ್ದೇಶದಿಂದ ನಮ್ಮ ವಿನೂತನ ಪ್ರಯತ್ನ ಮಾಡಲು ಪ್ರೇರೇಪಿಸಿ ಮುದ್ರಣಕ್ಕೆ ಸಹಾಯ ಹಸ್ತ ಚಾಚಿದ ತಮ್ಮೆಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ ಎಂಬುದಾಗಿ ಸಂಪಾದಕ ಎಸ್. ರಾಜುಕವಿ ಸೂಲೇನಹಳ್ಳಿ ಮುನ್ನುಡಿಯಲ್ಲಿ ಹೇಳಿದ್ದಾರೆ.

About the Author

ಎಸ್. ರಾಜು ಸೂಲೇನಹಳ್ಳಿ
(01 June 1988)

ಲೇಖಕ ಎಸ್. ರಾಜು ಸೂಲೇನಹಳ್ಳಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರದ ಸೂಲೇನಹಳ್ಳಿ ಗ್ರಾಮದವರು. ಎಂ. ಎ., ಬಿ. ಈಡಿ, ಡಿ. ಈಡಿ. ಹಾಗೂ ಎಂ.ಫಿಲ್ ಪದವೀಧರರು. ಪ್ರಸ್ತುತ ಎಸ್. ಜೆ. ಎಂ. ವಿದ್ಯಾಸಂಸ್ಥೆ ಯ ಎಸ್. ಜೆ. ಎಂ. ಹಿರಿಯ ಪ್ರಾಥಮಿಕ ಶಾಲೆ ನಾಗೊಂಡನಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ. ಸಾಹಿತ್ಯ ಮತ್ತು ಸಂಘಟನೆ, ಕತೆ, ಕಾದಂಬರಿ, ಲೇಖನ, ಕವನ ಹಾಗೂ ಸಂಶೋಧನಾ ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕರುನಾಡ ಹಣತೆ ಕವಿ ಬಳಗ ರಾಜ್ಯಾಧ್ಯಕ್ಷರು, ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಸಂಸ್ಥಾಪಕರು. ಕೃತಿಗಳು: ಪ್ರೇಮದ ಹಣತೆ (ಚಲನಚಿತ್ರಕ್ಕೆ ಆಯ್ಕೆಯಾದ ಕಾದಂಬರಿ, ಹಿಂದಿ, ತೆಲುಗು  ಭಾಷೆಗೂ ...

READ MORE

Related Books