ಕನ್ನಡದ ಪ್ರಮುಖ ಕವಿಗಳಲ್ಲಿ ಎಚ್.ಎಸ್. ಶಿವಪ್ರಕಾಶ್ ಅವರು ಕೂಡ ಒಬ್ಬರು. ಶಿಶುಪ್ರಾಸ, ಭಾವಗೀತೆ, ವಚನ, ತತ್ವಪದ, ದಾಸರಪದ, ಕಥನಕಾವ್ಯ, ಬೀದಿ ಮತ್ತು ಬೈಗುಳ, ಹೀಗೆ ಕನ್ನಡದ ಮಾತಿನ ಕಣಜದಲ್ಲಿ ಸಿಕ್ಕಿವುದನೆಲ್ಲ ಈ ಕೃತಿಯಲ್ಲಿ ಕವಿ ಚಿತ್ರಿಸಿದ್ದಾರೆ. ರೋಗ ಗ್ರಸ್ಥ ಸಮಾಜ ಒಂದರರಲ್ಲಿ ಕಾಲ ದೇಶಗಳನ್ನು ಕಾಲ ದೇಶಗಳಿಂದ ಬೇರ್ಪಡಿಸಿ ನೋಡಲು , ಆಧುನಿಕ, ವಸಾಹತುಶಾಹಿ, ಅಭಿವೃದ್ಧಿವಾದಿ ಪರಿಕಲ್ಪನೆಯ ಕಾಲದೇಶಗಳಿಂದ ಬೇರ್ಪಡಿಸಿ ನೋಡಲು ಉಪಮೆ ಅನಿವಾರ್ಯ ಎಂದು ಕವಿ ಇಲ್ಲಿ ವಿವರಿಸಿದ್ದಾರೆ.
ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು. ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ