ಹಿರಿಯ ಸಾಹಿತಿ ಪು.ತಿ. ನರಸಿಂಹಚಾರ್ಯ ಅವರು ಬರೆದ ಕವನ ಸಂಕಲನ-ಮಾಂದಳಿರು. ಇಲ್ಲಿಯ ಬಹುತೇಕ ಕವನಗಳು ಪ್ರಬುದ್ಧ ಕರ್ಣಾಟಕ ಪತ್ರಿಕೆ ಸೇರಿದಂತೆ ಇತರೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕವಿಯಲ್ಲಿ ಶಕ್ತಿ ವಿಶೇಷವೊಂದಿದ್ದರೆ ಕಸವನ್ನೂ ಸಹ ರಸವನ್ನಾಗಿಸಬಹುದು. ಅಂತಹ ವಿಶೇಷ ಶಕ್ತಿ ಪು.ತಿ.ನರಸಿಂಹಚಾರ್ಯ ಅವರಲ್ಲಿದೆ. ಹೀಗಾಗಿ, ಪ್ರತಿ ಪದ್ಯವೂ ಕಾವ್ಯವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಪ್ರಶಂಸಿದ್ದಾರೆ. ತ್ಯಾಗದ ಒಲುಮೆ, ಹೋದ ಬಾಲ್ಯ, ಚಂದ್ರ ಚುಂಬಿತ ಯಾಮಿನಿ, ಮೀನ ಕನ್ಯೆ, ನಂದಿಬೆಟ್ಟದ ಮೇಲುಗಡೆ, ಕೆರೆಯ ತಡಿಯಲ್ಲಿ ಹೀಗೆ ಒಟ್ಟು 23 ಕವಿತೆಗಳಿವೆ.
ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...
READ MORE