ಮಾಗಿಯ ಚಳಿಯಲಿ ಮೊಗ್ಗನು ಅರಸುತ..!

Author : ಅನಿಲ್‌ ವಡಗೇರಿ

Pages 80

₹ 99.00




Year of Publication: 2021
Published by: ಕಟ್ಟುಕತೆ ಕ್ರಿಯೇಷನ್ಸ್‌
Address: ಸುರಭಿ ಬಡಾವಣೆ, 2ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಳೇ ಯಲಹಂಕ, ಬೆಂಗಳೂರು-64
Phone: 9535623842

Synopsys

ಲೇಖಕ ಅನಿಲ್‌ ವಡಗೇರಿ ಅವರ ಮೊದಲ ಕವನ ಸಂಕಲನ- ʻಮಾಗಿಯ ಚಳಿಯಲಿ ಮೊಗ್ಗನು ಅರಸುತ..!ʼ 34 ಕವನಗಳು, 68 ಹನಿಗವನಳನ್ನು ಈ ಕವನ ಸಂಕಲನ ಒಳಗೊಂಡಿದೆ. ಸಂಸಾರ ಪ್ರೀತಿಯ ಕವನಗಳ ಗೊಂಚಲು ಇದು.  ಉಪನ್ಯಾಸಕ ರತ್ನಾಕರ ನಾಯ್ಡು ಅವರು ಬರೆದ ಬೆನ್ನುಡಿಯಲ್ಲಿ, ʻಕವನ ಅಂದರೇ ಹಾಗೇ, ಅದು ಕಣ್ಣು ತೆರೆಸಬೇಕು, ಮನ ತಣಿಸಬೇಕು, ಎಚ್ಚರಿಸಬೇಕು; ಎಚ್ಚರದಿಂದ ಇರುವಂತೆ ಕಾಯಬೇಕು. ಅಂತಹ ಕವನಗಳಾಗಲು ಕಾವು ಬೇಕು ಕಾಯಬೇಕು. ಸಂಸಾರಿಕ ಜಗತ್ತಿನ ಆಚೆಗಿರುವ ಜಗತ್ತಿಗೂ ಕವಿ ಮಿಡಿಯಬೇಕು. ಅಲ್ಲಿ ನೋವಿದೆ; ಪ್ರೀತಿ ಇದೆ. ಹತಾಶೆ, ನಿರಾಸೆ ಸವಾಲು ಎಲ್ಲ ಇದೆ. ಅಂತಹ ಜಗತ್ತಿನ ಅರಿವು ಅನಿಲ್‌ ಅವರಿಗಿದೆ. ಆ ಒಳ ದೃಷ್ಟಿ, ಶೈಲಿ ಅವರ ಕವನಗಳಲ್ಲಿದೆ. ಅದನ್ನು ಸಮಾಜದ ಎಲ್ಲ ವಲಯಗಳಿಗೂ ಅವರು ಹಾಯಿಸಬೇಕುʼ. ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಅನಿಲ್‌ ವಡಗೇರಿ
(05 June 1980)

ಲೇಖಕ ಅನಿಲ್‌ ವಡಗೇರಿ ಅವರು ಮೂಲತಃ ಸಿದ್ದಾಪುರದ ವಡಗೇರಿಯವರು. ವಿಟ್ಲದ ಬೊಳಂತಿಮೊಗರು ಪ್ರೌಢಶಾಲೆಯಲ್ಲಿ ಹಿಂದಿ ಭಾಷೆ ಶಿಕ್ಷಕರಾಗಿದ್ದಾರೆ.  ಗಜಲ್‌ ಮತ್ತೆ ಹನಿಗವಿತೆಗಳನ್ನು ರಚಿಸುವುದು ಇವರ ಹವ್ಯಾಸ. ತಮ್ಮದೆ ಆದ ಆರೋಹಿ ಕ್ರಿಯೇಷನ್ಸ್‌ ಅಡಿಯಲ್ಲಿ ತಾವೇ ಸಾಹಿತ್ಯ ರಚಿಸಿ ಅನೇಕ ಆಲ್ಬಂ ಹಾಡುಗಳನ್ನು ಹೊರತಂದಿದ್ದಾರೆ. ಹಿಂದಿ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಅಂಕಣ ರೂಪದಲ್ಲಿ ಪ್ರಸ್ತತ ಪಡಿಸಿದ್ದಾರೆ. ʻಮಾಗಿಯ ಚಳಿಯಲಿ ಮೊಗ್ಗನು ಅರಸುತʼ ಇವರ ಮೊದಲ ಕವನ ಸಂಕಲನ. ...

READ MORE

Related Books