ಕುವೆಂಪು ಅವರ ಸಾಹಿತ್ಯಕ್ಕೂ ಬದುಕಿಗೂ ನಿಸರ್ಗಕ್ಕೂ ಅವಿನಾಭಾವ ಸಂಬಂಧವಿರುವುದು ಸಹೃದಯರಿಗೆ ತಿಳಿದೇ ಇದೆ. ಅವರ ಸಾಹಿತ್ಯದಲ್ಲಿ ಹಸುರು, ಹೂವು, ಕಾಡು, ಕಣಿವೆ, ಹಕ್ಕಿ, ಪ್ರಾಣಿ... ಇವೆಲ್ಲವೂ ಹಾಸುಹೊಕ್ಕಾಗಿವೆ. ಕುವೆಂಪು ವಿಚಾರಧಾರೆಯ ಫಲ-ಪುಷ್ಪ ಪ್ರದರ್ಶನವನ್ನು ಸಾಹಿತ್ಯಕವಾಗಿಯೂ ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಉದ್ಯಾನ-ಹೂವುಗಳ ಕುರಿತ ಕುವೆಂಪು ಅವರ ಪ್ರಕಟಿತ ಮತ್ತು ಅಪ್ರಕಟಿತ ಕವಿತೆಗಳ ಒಂದು ಸಂಕಲನವನ್ನು ಸ್ಮರಣಿಕೆಯ ರೂಪದಲ್ಲಿ ಪ್ರಕಟಿಸಲಾಗಿದೆ.
ಕವಿಮನೆ, ಕವಿಶೈಲದ ಜೊತೆಯಲ್ಲಿ ಹೂವು-ಉದ್ಯಾನಗಳನ್ನು ಕುರಿತ ಕವಿತೆಗಳನ್ನು, ಜೊತೆಯಲ್ಲಿ ಸಾಂದರ್ಭಿಕವಾಗಿ ’ಭಾರತ ಜನನಿಗೆ’ ಕವನದೊಂದಿಗೆ, ಭಾರತ ಸ್ವಾತಂತ್ರ್ಯೋತ್ಸವ ಸಂಬಂಧದ ಕವಿತೆಗಳನ್ನೂ ಸೇರಿಸಿ ಈ ಸಂಕಲನವನ್ನು ಸಚಿತ್ರವಾಗಿ ಸಿದ್ಧಪಡಿಸಲಾಗಿದೆ.
ಸುಮಾರು ಅರ್ಧ ಶತಮಾನಗಳ ಕಾಲ, ಕವಿ ಆಗಾಗ ಹೂವುಳಿಂದ ತಾವು ಪಡೆದ ದರ್ಶನವನ್ನು ಕವಿತೆಗಳ ರೂಪದಲ್ಲಿ ಅಭಿವ್ಯಕ್ತಿಪಡಿಸುತ್ತಿದ್ದರು. ೩ ಶಿಶುಗೀತೆಗಳನ್ನು ಒಳಗೊಂಡಂತೆ ೪೬ ಕನ್ನಡ ಕವನಗಳ ಜೊತೆಯಲ್ಲಿ ೪ ಇಂಗ್ಲಿಷ್ ಕವಿತೆಗಳೂ ಇವೆ. ಆ ಎಲ್ಲಾ ಕವಿತೆಗಳನ್ನು ರಚನೆಯ ಕಾಲಾನುಕ್ರಮದಲ್ಲಿ ಇಲ್ಲಿ ಸಂಪಾದಿಸಲಾಗಿದೆ. ಜೊತೆಗೆ ಕುವೆಂಪು, ಕುಪ್ಪಳಿ-ಕವಿಮನೆ, ಕವಿಶೈಲ ಕುರಿತಾದ ಕವಿಯ ಗದ್ಯ-ಪದ್ಯಗಳನ್ನು ಆಯ್ದು ಇಲ್ಲಿ ಸಂಯೋಜಿಸಲಾಗಿದೆ. ರೈತಗೀತೆ, ನಾಡಗೀತೆಗಳ ಜೊತೆಯಲ್ಲಿ ಸಂದರ್ಭೋಚಿತವಾಗಿ ’ಭಾರತ ಜನನಿಗೆ’, ’ಶ್ರೀ ಸ್ವಾತಂತ್ರ್ಯೋದಯ ಮಹಾಪ್ರಗಾಥಾ’ ಮತ್ತು ’ಸ್ವಾತಂತ್ರ್ಯ ಲಕ್ಷ್ಮಿಗೆ’ ಎಂಬ ಕವಿತೆಗಳನ್ನೂ ಕೊಟ್ಟಿದೆ. ಜೊತೆಗೆ ವಿಶ್ವಮಾನವ ಸಂದೇಶವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೊಡಲಾಗಿದೆ. ಬಿ. ಆರ್. ಸತ್ಯನಾರಾಯಣ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...
READ MORE