ಕವಯತ್ರಿ ಶಾಂತಾ ಪಸ್ತಾಪುರ ಅವರ ಕವನ ಸಂಕಲನ-ಕುಸುಮಬಾಲೆ. ಒಟ್ಟು 57 ಕವನಗಳಿವೆ. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆಯುತ್ತವೆ. ಸಂಕಲನಕ್ಕೆ ಮುನ್ನುಡಿ ಬರೆದ ಸಾಹಿತಿ ಪ್ರೊ. ರವೀಂದ್ರ ಕರ್ಜಗಿ ‘ಆರ್ದ್ರತೆ. ಮಮತೆ, ಅಂತಃಕರಣ, ತಾಯ್ತನ ಗುಣಗಳೆಲ್ಲವೂ ಕವನಗಳ ತುಂಬಾ ಎದ್ದು ಕಾಣುವ ಅಂಶ. ಮಹಿಳೆಯ ಹಿರಿಮೆ-ಗರಿಮೆಗಳು ಸಹ ಚಿತ್ರಿತವಾಗಿವೆ. ಮಹಿಳಾ ಸಶಕ್ತೀಕರಣವನ್ನು ಪ್ರತಿಪಾದಿಸುತ್ತವೆ. ವೈಚಾರಿಕ ಜಾಗೃತಿಯನ್ನು, ವಿವೇಕದ ಔನ್ನತ್ಯವನ್ನು ಸೂಚಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಕವಿಯತ್ರಿ ಶಾಂತಾ ಪಸ್ತಾಪುರ ಮೂಲತಃ ಬೀದರದವರು. ತಂದೆ ರಾಚಪ್ಪ ಭಂಡಾರ, ತಾಯಿ ಮಹಾದೇವಿ ಭಂಡಾರ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ. ಕಲಬುರಗಿಯಲ್ಲಿ ವಾಸವಿದ್ದಾರೆ. ಕೃತಿಗಳು: ಮನದಾಳದ ಮಾತು (ಕವನ ಸಂಕಲನ) ಪಯಣ (ಪ್ರವಾಸ ಕಥನ), ನೆನಪಿನಂಗಳ (ಕವನ ಸಂಕಲನ), ಕುಸುಮ ಬಾಲೆ (ಕವನ ಸಂಕಲನ), ಗೆಳೆತಿಯರ ದಂಡು ಯೂರೋಪ್ ಗೆ ಹೋಗಿದ್ದು (ಪ್ರವಾಸ ಕಥನ), ಬದುಕೇ ಒಂದು ಕಥೆ (ಕಥಾ ಸಂಕಲನ), ಅನುಭವ -ಅಭಿವ್ಯಕ್ತಿ ಮತ್ತು ಚಿಂತನ (ಲಲಿತ ಪ್ರಬಂಧಗಳು) , ಕಾವ್ಯಧಾರೆ (ಅವರು ರಚಿಸಿ, ಹಾಡಿದ ಧ್ವನಿ ಸುರುಳಿ) ಪ್ರಶಸ್ತಿ-ಪುರಸ್ಕಾರಗಳು: ಬದುಕೆ ಒಂದು ಕಥೆ ಕಥಾ ಸಂಕಲನಕ್ಕೆ ಶ್ರೇಷ್ಠ ಸಾಹಿತ್ಯ ಕೃತಿ ಪ್ರಶಸ್ತಿ, ಅಖಿಲ ...
READ MORE