ಕುದಿವ ನೀಲಿಯ ಕಡಲು

Author : ಸಿದ್ಧಲಿಂಗಯ್ಯ

Pages 56

₹ 50.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 0046
Phone: 26617100, 26617755

Synopsys

ಕವಿ ಸಿದ್ಧಲಿಂಗಯ್ಯ ಅವರ ಈ ಸಂಕಲನದಲ್ಲಿ ನಲವತ್ತು ಕವಿತೆಗಳಿವೆ. ಕುದಿವ ನೀಲಿಯ ಕಡಲು' ಕವನ ಸಂಕಲನದಲ್ಲಿ 'ಯುಗಾದಿ' ಕುರಿತ ಐದು ಪದ್ಯಗಳು, ಕಿ.ರಂ. ನಾಗರಾಜ ಕುರಿತ ಎರಡು ಪದ್ಯಗಳು, ಡಿ.ಆರ್. ನಾಗರಾಜ್, ಬಸವಣ್ಣ, ಅಂಬೇಡ್ಕರ್, ಗಾಂಧಿ, ಕಾರ್ಲ್‌ ಮಾರ್ಕ್ಸ್, ಬೆಂಜಮಿನ್ ಮೊಲಾಯಿಸ್, ಶೂದ್ರ, ರಾಮಚಂದ್ರಶರ್ಮ, ರಾಮಕೃಷ್ಣ ಹೆಗಡೆ ಕುರಿತ ಒಂದೊಂದು ಪದ್ಯಗಳಿವೆ. 

ಈ ಸಂಕಲನ ಬಗ್ಗೆ ಡಾ. ಬೈರಮಂಗಲ ರಾಮೇಗೌಡ ಅವರು ’ಇವೆಲ್ಲ ಡಾ. ಸಿದ್ದಲಿಂಗಯುನವರು ಒಂದು ಸಮುದಾಯದ ಪ್ರತಿನಿಧಿಯಾಗಿ, ಹರಿಕಾರನಾಗಿ, ನಾಯಕನಾಗಿ ಪ್ರಶ್ನಿಸುವ ಅಥವಾ ಕೊರಳಪಟ್ಟಿಯನ್ನು ಹಿಡಿಯುವ ಬದಲಾಗಿ ಎಲ್ಲರೆದೆಯ ನೋವು ಅಳಿದು ನವಜೀವನ ಮೂಡಲಿ' ಎನ್ನುವ ವಿಶ್ವಮಾನವತೆಯ ಸಂದೇಶ ಸಾರಲು ತವಕಿಸುತ್ತವೆ.

ಬಿ.ಎ. ವಿದಾರ್ಥಿಯಾಗಿದ್ದಾಗಲೇ ಕುವೆಂಪು ಪ್ರಭಾವಕ್ಕೆ ಒಳಗಾಗಿ ಕವಿತೆಗಳನ್ನು ಬರೆಯುತ್ತಿದ್ದ ಸಿದ್ದಲಿಂಗಯ್ಯನವರು ಹೊಸ ದಾರಿಯನ್ನು ಹಿಡಿದು ಒಂಟಿ ಸಲಗದಂತೆ ಮುನ್ನುಗ್ಗಿ 'ಹೊಲೆಮಾದಿಗರ ಹಾಡು' ಸಂಕಲನ ಪ್ರಕಟಿಸಿ ಸಂಪ್ರದಾಯವಾದಿಗಳನ್ನೂ ಮಡಿಮೈಲಿಗೆಯ ಮಂದಿಯನ್ನೂ ಬೆಚ್ಚಿಬೀಳಿಸಿದ್ದು ಈಗ ಇತಿಹಾಸ. “ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ” ಎಂದು ಉದೊಷಿಸಿದ ಬಂಡಾಯ ಸಾಹಿತ್ಯ, ಆರಂಭ ಘಟ್ಟದಲ್ಲಿ ತನ್ನನ್ನು ಮುನ್ನಡೆಸಿಕೊಳ್ಳುವ ಸಾಧನವಾಗಿ ಸಿದ್ದಲಿಂಗಯ್ಯನವರ ಕಾವ್ಯವನ್ನೇ ನೆಮಿ ಕೊಳ್ಳಬೇಕಾಗಿ ಬಂದದ್ದು ಆಶ್ಚರ್ಯವಾದರೂ ಸತ್ಯ. ಸಿದ್ದಲಿಂಗಯ್ಯನವರು 'ಇಕ್ರಲಾ ವದೀರ್ಲಾ, ಈ ನನ್ಮಕ್ಕಳ ಚರ್ಮ ಎಬ್ರಲಾ” ಎಂದು ಸೋಟಿಸಿ, ಬೀದಿ ಕಾಳಗಕ್ಕೂ ಸಿದ್ದ ಎಂದು ಗಟ್ಟಿಧ್ವನಿಯಲ್ಲಿ ಕೂಗಿದ್ದು ಶತಶತಮಾನಗಳ ಅನ್ಯಾಯ, ಅಸಮಾನತೆ, ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಹಿಂಸಾಚಾರಗಳ ವಿರುದ ಸೇಡು ತೀರಿಸಿಕೊಳ್ಳುತ್ತೇವೆನ್ನುವ ಸಾರ್ವಜನಿಕ ಪ್ರಕಟಣೆಯಾಗಿ, ದಲಿತ ಶಕ್ತಿಯ ಸಂಘಟಿತ ಅಭಿವ್ಯಕ್ತಿಯಾಗಿ ಶೋಷಕರನ್ನು ಅಲುಗಾಡಿಸಿದ್ದಂತೂ ನಿಜ. ಅದು ತಾನು ಪ್ರತಿನಿಧಿಸುವ ಜನಾಂಗದ ಹಾಗೂ ಅದೇ ಕಾಲಕ್ಕೆ ತನ್ನನ್ನೂ ಆವರಿಸಿಕೊಂಡ ಒಡಲಾಳದ ಸಂಕಟವನ್ನು ಸಿಟ್ಟಾಗಿ, ಆಕ್ರೋಶವಾಗಿ ಹೊರಹಾಕಲು ಅಕ್ಷರವಂತ ದಲಿತರು ಆಯ್ಕೆ ಮಾಡಿಕೊಂಡ ಮಾರ್ಗವಾಗಿತ್ತು’ ಎಂದು ವಿಶ್ಲೇಷಿಸಿದ್ದಾರೆ.

About the Author

ಸಿದ್ಧಲಿಂಗಯ್ಯ
(03 February 1954)

ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ...

READ MORE

Related Books