ಡಿ ರಾಮಣ್ಣ ಅಲ್ಮರ್ಸಿಕೇರಿ ಅವರ ಚೊಚ್ಚಲ ಕವನ ಸಂಕಲನ- ‘ಕೂರಿಗೆ ತಾಳು' ರಾಮಣ್ಣ ಅವರು ಕೊಪ್ಪಳದ ಕಾಳಿದಾಸ ಪ್ರೌಢಶಾಲೆಯಲ್ಲಿವಿಜ್ಞಾನ ಶಿಕ್ಷಕರು. ಕವನ ಸಂಕಲನದ ಬೆನ್ನುಡಿಯಲ್ಲಿ ಶಿ. ಕಾ. ಬಡಿಗೇರ, ' ಇಲ್ಲಿಯ ಕಾವ್ಯಗಳಲ್ಲಿ ಗ್ರಾಮೀಣ ಸೊಗಡು ಬಿಳಿಜೋಳದ ತೆನೆಯಂತೆ ತೂಗಾಡುತ್ಥದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುನ್ನುಡಿ ಬರೆದ ಸಾಹಿತಿ ಅಬ್ಬಾಸ್ ಮೇಲಿನಮನಿ, ಪ್ರಸ್ತುತ ಮಹಾನಗರಗಳು ವ್ಯವಹಾರ ಬುದ್ಧಿಯನ್ನು ಚುರುಕುತನ ಚಿಗುರಿಸಿಕೊಂದಡು, ಬುದ್ಧನ ಅಂತಃಕರಣಗಳು ಬಳ್ಳಿಯಿಂದ ಬೇರ್ಪಟ್ಟು ಬ್ರಹ್ಮರಾಕ್ಷಸ ಜೀವನೋತ್ಸಾಹವನ್ನು ಉಡುಗಿಸುತ್ತಿರುವ ಲೋಕವನ್ನು ದಿಗಿಲುಗೊಳಿಸುತ್ತಿರುವ ಹೊತ್ತಿನಲ್ಲಿ, ಗ್ರಾಮ ಸಂಸ್ಕೃತಿಯ ಹೃದಯವಂತಿಕೆಯ ಮಡಿಲಿನ ಸಾತತ್ಯ ವನ್ನು ಸಂಕಲನ ಉದ್ದಕ್ಕೂ ಅನುರಣಿಸುವ ಕವಿ' ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮಣ್ಣ ಡಿ ಅಲ್ಮರ್ಸಿಕೇರಿ ತಂದೆ. ಡಿ, ಫಕೀರಪ್ಪ. ತಾಯಿ. ಡಿ .ಹಾಲಮ್ಮ . ಹುಟ್ಟಿದ ಸ್ಥಳ;ಅಲಮರ್ಸಿಕೇರಿ. (ಬಳ್ಳಾರಿ ಜಿಲ್ಲಾ ಹರಪನಹಳ್ಳಿ ತಾಲೂಕು ) ಜನನ; 01:06:1971. ಪ್ರಾಥಮಿಕ ಶಿಕ್ಷಣ: ಸ .ಹಿ .ಪ್ರಾ. ಶಾಲೆ, ಗೋವೇರಹಳ್ಳಿ. ಪ್ರೌಢ ಶಿಕ್ಷಣ: ಸರ್ಕಾರಿ ಜೂನಿಯರ್ ಕಾಲೇಜು ಹರಪನಹಳ್ಳಿ. ಪದವಿ: ಎ.ಡಿ. ಬಿ. ಕಾಲೇಜ್ ಹ.ಹಳ್ಳಿ. ಬಿ.ಈಡಿ: ಟಿ. ಎಂ.ಎ.ಈ.ಶಿಕ್ಷಣ ಮಹಾವಿದ್ಯಾಲಯ ಹರಪನಹಳ್ಳಿ. ಸ್ನಾತಕೋತ್ತರ ಪದವಿ: ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ. ವೃತ್ತಿ: ಅಧ್ಯಾಪಕರು. ಕಾಳಿದಾಸ ಪ್ರೌಢಶಾಲೆ ಕೊಪ್ಪಳ. ಹವ್ಯಾಸ : ಬರಹ.( ಸಮಕಾಲೀನ ಸಮಸ್ಯೆಗಳ ಕುರಿತಾದ ಪತ್ರಿಕಾ ಬರಹಗಳು) ವಿಜ್ಞಾನ ಕಿರು ನಾಟಕ: ...
READ MORE