ಕುವೆಂಪು ಅವರ ವಚನ ಕವನಗಳನ್ನು ಒಳಗೊಂಡ ಸಂಕಲನವಿದು. 1946ರ ನವೆಂಬರ್ ನಲ್ಲಿ ಮೊದಲ ಬಾರಿಗೆ ಕಾವ್ಯಾಲಯದಿಂದ ಪ್ರಕಟವಾಗಿದ್ದ ಈ ಸಂಕಲನವು ನಂತರ ಉದಯರವಿ ಪ್ರಕಾಶನದಿಂದ ಮರುಮುದ್ರಣಗೊಂಡಿದೆ. ಈ ಸಂಕಲನದಲ್ಲಿ ಒಟ್ಟು 60 ವಚನ ಕವನಗಳಿವೆ.
ಈ ಸಂಕಲನವು ಕವಿ ಕುವೆಂಪು ಅವರ ಭಿನ್ನ ಬಗೆಯ ಸಂಕಲನ. ಕವಿಯ ಮನಸ್ಸಿನಲ್ಲಿ ಹುಟ್ಟಿದ ಭಾವನೆಗಳನ್ನು ಕವಿತೆಗಳಾಗಿಸಲಾಗಿದೆ. ಒಂದೊಂದು ವಚನವೂ ಭಾವಗೀತೆಯಂತಿದೆ. ಬುದ್ಧಿ-ಭಾವಗಳೆರಡೂ ಹದವಾಗಿ ಬೆಸೆದಂತಿವೆ. ವಿಚಾರ ಪ್ರಚೋದಕ ಕವಿತೆಗಳು ಗಮನ ಸೆಳೆಯುತ್ತವೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE